ಶಿಡ್ಲಘಟ್ಟ: ತಾಲ್ಲೂಕಿನ ಕೆ.ಮುತ್ತುಗದಹಳ್ಳಿಯಲ್ಲಿ ಗಂಗರ ಕಾಲದ ಶಾಸನೋಕ್ತ ವೀರಗಲ್ಲು ಪತ್ತೆಯಾಗಿದೆ.

ಶಾಸನ ತಜ್ಞರಾದ ಕೆ.ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್ ಅವರು ಗ್ರಾಮಸ್ಥರ ನೆರವಿನಿಂದ ಕ್ರಿ.ಶ.890ರ ಅಪರೂಪದ ವೀರಗಲ್ಲನ್ನು ಪತ್ತೆ ಹಚ್ಚಿದ್ದು, ಅದರ ಪಠ್ಯ ಓದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ ಸಿಕ್ಕ ಗಂಗರ ಹತ್ತು ಶಿಲಾಶಾಸನಗಳ ಪಟ್ಟಿಗೆ ವೀರಗಲ್ಲು ಹೊಸ ಸೇರ್ಪಡೆ. ಇದರಲ್ಲಿ ಗಂಗರ ವಿರುದ್ಧ ನೊಳಂಬರ ಮಹೇಂದ್ರ ನಡೆಸಿದ್ದ ಕಾಳಗದಲ್ಲಿ ಮುತ್ತುಗದಹಳ್ಳಿ ಪ್ರದೇಶದ ಚೊರಟೂರಿನ ಅತ್ತನ್ನ ಎಂಬ ವೀರನೊಬ್ಬ ಭಾಗವಹಿಸಿ ವೀರಮರಣ ಹೊಂದಿದರು ಎಂಬ ಮಾಹಿತಿ ಹಾಗೂ ವೀರನ ಮೈತುಂಬ ಬಾಣಗಳು ಹೊಕ್ಕಿರುವ ಶಿಲ್ಪ ಇದಾಗಿದೆ.

ಕ್ರಿ.ಶ.840ರ ಸಮಯದಲ್ಲಿ ಗಂಗರೊಡನೆ ನೆಂಟಸ್ತಿಕೆ ಮಾಡಿದ್ದ ನೊಳಂಬರು ಕ್ರಿ.ಶ. 890ರ ವೇಳೆಗೆ ಅವರ ವಿರೋಧಿಗಳಾಗಿದ್ದರು. ಗಂಗರ ಸಾಮಂತನಾಗಿ ಮುಂದುವರೆಯಲು ಇಷ್ಟ ಪಡದ ಮಹೇಂದ್ರ ತಿರುಗಿ ಬಿದ್ದಿದ್ದ.

ಕೋಚಿಮುಲ್ ಮಾಜಿ ನಿರ್ದೇಶಕ ಕೆ.ಮುತ್ತುಗದಹಳ್ಳಿಯ ಆರ್.ಶ್ರೀನಿವಾಸ್ ಮಾತನಾಡಿ, ‘ನಾವು ಚಿಕ್ಕಂದಿನಲ್ಲಿ ಈ ಕಲ್ಲನ್ನು ನೋಡಿದ್ದೆವು. ಅದರ ಮೇಲಿನ ಹಳಗನ್ನಡದ ಲಿಪಿಯನ್ನು ಶಾಸನ ತಜ್ಞರು ಓದು ಹೇಳಿದ್ದಾರೆ. ನಮ್ಮ ಗ್ರಾಮಕ್ಕೆ ಸೇರಿರುವ ವೀರನ ಶೌರ್ಯಗಾಥೆಯನ್ನು ತಿಳಿಸಿಕೊಡುವ ಈ ಅಪರೂಪದ ಕಲ್ಲನ್ನು ನಮ್ಮ ಹಳ್ಳಿಯ ಭಜನೆ ಮನೆ ಬಳಿ ಸ್ಥಾಪಿಸುತ್ತೇವೆ’ ಎಂದರು.

ಈ ವೇಳೆ ಕೆ.ಮುತ್ತುಗದಹಳ್ಳಿಯ ಆರ್.ಶ್ರೀನಿವಾಸ್, ಮುನಿನಾರಾಯಣಪ್ಪ, ನಾರಾಯಣಸ್ವಾಮಿ, ವೆಂಕಟೇಶ್, ನಾಗರಾಜ್, ಶ್ರೀರಾಮ್, ಸಂಜೀವಪ್ಪ, ಮಂಜುನಾಥ್ ಹಾಗೂ ಸಂಶೋಧನಾ ವಿದ್ಯಾರ್ಥಿ ಅಶ್ವಿನಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-16-1504071972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.