ಶಿಡ್ಲಘಟ್ಟ: ‘ಬೇಸಿಗೆ ಶಿಬಿರ ಕೇವಲ ಕೆಲವು ದಿನಗಳ ಚಟುವಟಿಕೆಯಲ್ಲ, ಬದಲಿಗೆ ಮಕ್ಕಳ ಜೀವನದಲ್ಲಿ ಮಹತ್ವದ ಅಧ್ಯಾಯವಾಗಿ ಬದಲಾಗಿದೆ’ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ಹೇಳಿದರು.

ಅರಳೇಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಜೈ ಭಾರತ್ ಕರಾಟೆ ಮತ್ತು ಮಾರ್ಷಲ್ ಆರ್ಟ್ ಅಸೋಸಿಯೇಷನ್ ವತಿಯಿಂದ 30 ದಿನ ನಡೆದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಶಿಬಿರದಲ್ಲಿ ಮಕ್ಕಳು ಕರಾಟೆಯ ತಾಕತ್ತು ಕಲಿತಿದ್ದೀರಿ. ಅದು ದೃಢತೆಯನ್ನು ಹೆಚ್ಚಿಸುತ್ತದೆ. ಸ್ಕೇಟಿಂಗ್ನಲ್ಲಿ ಸಮತೋಲನ ಕಲಿತಿದ್ದೀರಿ. ಜೀವನದಲ್ಲಿ ಸರಿಯಾಗಿ ನಿಲ್ಲುವುದನ್ನು ಕಲಿಸುತ್ತದೆ. ಹಲವು ಕ್ರೀಡೆಗಳು ನಿಮ್ಮನ್ನು ತಂಡದ ಆಟಗಾರರನ್ನಾಗಿ ಮಾಡಿವೆ. ಈ ಎಲ್ಲ ಕ್ರೀಡೆಗಳು ನಿಮಗೆ ಕೇವಲ ಆಟವಲ್ಲ, ಜೀವನದ ಪಾಠಗಳು. ಉತ್ಸಾಹದಿಂದ ಆರಂಭಿಸಿ, ತಪ್ಪುಗಳಿಂದ ಕಲಿತು, ಗೆಲುವಿನ ಸ್ವಾದ ಅನುಭವಿಸಿದ್ದೀರಿ. ನೀವು ಈಗ ಆತ್ಮವಿಶ್ವಾಸದಿಂದ ತುಂಬಿದ್ದೀರಿ. ಆರೋಗ್ಯಕ್ಕೆ ಸ್ನೇಹಿತರಾಗಿದ್ದೀರಿ ಎಂದು ಹೇಳಿದರು.

ಶಿಬಿರದಲ್ಲಿ ಮಕ್ಕಳಿಗೆ ಕರಾಟೆ, ಸ್ಕೇಟಿಂಗ್, ಸ್ವಿಮ್ಮಿಂಗ್, ಜಿಮ್ನಾಸ್ಟಿಕ್, ಡ್ಯಾನ್ಸ್, ಯೋಗ, ಕ್ರೀಡೆಗಳನ್ನು ಕಲಿಸಲಾಯಿತು. ಈ ಶಿಬಿರದಲ್ಲಿ 30 ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-16-509245596

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.