ಶಿಡ್ಲಘಟ್ಟ: ಪ್ರಕೃತಿಯಲ್ಲಿ ನೈಸರ್ಗಿಕವಾಗಿ ನಡೆಯುವ ಹಲವಾರು ಜೀವಚಕ್ರ ಮತ್ತು ಪರಿಸರ ಪ್ರಕ್ರಿಯೆಗಳ ಫಲವಾಗಿ ಇಂದು ಮಾನವ ಜೀವನ ಸಮತೋಲನದಲ್ಲಿದೆ. ಆದರೆ ಅರಣ್ಯ ನಾಶ, ಮಣ್ಣಿನ ಸವಕಳಿ, ಜೀವ ವೈವಿಧ್ಯದ ಕುಸಿತ ಮತ್ತು ಹವಾಮಾನ ಬದಲಾವಣೆ ಸವಾಲು ಹೆಚ್ಚುತ್ತಿವೆ. ಪರಿಸರ ಸಂರಕ್ಷಣೆ ಪ್ರತಿ ನಾಗರಿಕನ ಜವಾಬ್ದಾರಿಯಾಗಬೇಕು ಎಂದು ಎಫ್ಇಎಸ್ ಸಂಸ್ಥೆಯ ಉಪ ಯೋಜನಾಧಿಕಾರಿ ಎಸ್.ಜಿ.ಗೋಪಿ ಹೇಳಿದರು.

ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್ಇಎಸ್) ಸಂಸ್ಥೆಯಿಂದ ತಾಲ್ಲೂಕಿನ ಬಶೆಟ್ಟಹಳ್ಳಿ ವ್ಯಾಪ್ತಿಯ ರಾಮಲಿಂಗೇಶ್ವರ ಬೆಟ್ಟದ ಸುತ್ತಮುತ್ತ ಹಮ್ಮಿಕೊಂಡಿದ್ದ ಸ್ಥಳೀಯ ಅರಣ್ಯ ಬೀಜಗಳ ಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಫ್ಇಎಸ್ ಸಂಸ್ಥೆ ಸ್ಥಳೀಯ ಅರಣ್ಯ ಬೀಜ ಸಂಗ್ರಹಣೆ ಕಾರ್ಯಕ್ರಮ ಆಯೋಜಿಸಿದೆ. ಸಂಗ್ರಹಿಸಲಾದ ಬೀಜಗಳನ್ನು ‘ಒನ್ ಪ್ಲಸ್ ತ್ರೀ’ ಮಾದರಿಯಡಿ ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಿದರು.

ಈ ಮಾದರಿಯಲ್ಲಿ ಒಂದು ಸಸಿಯೊಂದಿಗೆ ಅದರ ಸುತ್ತಮುತ್ತ ಸ್ಥಳೀಯ ಬೀಜಗಳನ್ನು ಬಿತ್ತನೆ ಮಾಡುವುದರಿಂದ, ಯಾವುದಾದರೂ ಕಾರಣಗಳಿಂದ ನೆಟ್ಟ ಸಸಿ ನಾಶವಾದರೂ ಬೀಜಗಳಿಂದ ಹೊಸ ಮೊಳಕೆಗಳು ಬೆಳೆಯುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ನೈಸರ್ಗಿಕವಾಗಿ ಗಿಡಮರಗಳ ಪುನರುತ್ಥಾನ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಎಫ್ಇಎಸ್ ಸಂಸ್ಥೆಯ ಎನ್.ರಮೇಶ್ ಮಾತನಾಡಿ, ಸಮುದಾಯದ ಸಹಭಾಗಿತ್ವದೊಂದಿಗೆ ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಪುನರುಜ್ಜೀವನ, ಅರಣ್ಯ ಅಭಿವೃದ್ಧಿ ಹಾಗೂ ಸುಸ್ಥಿರ ಜೀವನಶೈಲಿಗೆ ಉತ್ತೇಜನ ನೀಡುವ ಹಲವಾರು ಕಾರ್ಯಕ್ರಮಗಳನ್ನು ಎಫ್ಇಎಸ್ ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ ಎಂದರು.

ವಿವಿಧ ಕಾಲಮಾನಗಳಲ್ಲಿ ಲಭ್ಯವಾಗುವ ಅರಣ್ಯ ಬೀಜಗಳ ಕುರಿತು ಸಮುದಾಯದೊಂದಿಗೆ ಚರ್ಚಿಸಿ ಬೀಜ ಕ್ಯಾಲೆಂಡರ್ ಸಿದ್ಧಪಡಿಸುವ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು. ಪ್ರತಿ ಋತುವಿನಲ್ಲಿ ದೊರೆಯುವ ಬೀಜಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಸಂಗ್ರಹಿಸಿ, ಸಂರಕ್ಷಿಸಿ ಪರಿಸರ ಪುನರ್ಜೀವನ ಕಾರ್ಯಗಳಲ್ಲಿ ಬಳಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳು, ಸಿಬ್ಬಂದಿ, ಸಮುದಾಯದ ಪ್ರತಿನಿಧಿಗಳು ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳು ಸೇರಿದಂತೆ 30ಕ್ಕೂ ಹೆಚ್ಚು ಜನರು ಸ್ಥಳೀಯ ಅರಣ್ಯ ಸಸ್ಯಗಳ ಬೀಜ ಸಂಗ್ರಹಿಸಿದರು. ಒಟ್ಟು 12 ಚೀಲಗಳಷ್ಟು ಬೀಜ ಸಂಗ್ರಹಿಸಿದರು.

ಎಫ್ಇಎಸ್ ಸಂಸ್ಥೆಯ ಲೀಲಾವತಿ, ವೈ.ನರಸಿಂಹಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-16-616388115

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.