ಶಿಡ್ಲಘಟ್ಟ: ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಡಾಂಬರು ಮಿಶ್ರಣ ಘಟಕ ತೆರವಿಗೆ ಒತ್ತಾಯಿಸಿ ಸಿ.ಎನ್. ಹೊಸೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಡಾಂಬರ ಮಿಶ್ರಣ ಘಟಕದಿಂದ ಹೊರಬರುತ್ತಿರುವ ವಿಷ ಅನಿಲದಿಂದ ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ದಲಿತ ಜನಸೇನಾ ರಾಜ್ಯ ಘಟಕದ ಅಧ್ಯಕ್ಷ ಟಿ. ಭರತ್, ‘ಸಿ.ಎನ್. ಹೊಸೂರು ಗ್ರಾಮದ ಗಡಿಯಲ್ಲಿ 8 ತಿಂಗಳ ಹಿಂದೆ ಹಾಟ್ ಮಿಕ್ಸ್ ಘಟಕ (ರಸ್ತೆಗೆ ಹಾಕುವ ಡಾಂಬರು ತಯಾರಿಸುವ ಕಾರ್ಖಾನೆ) ನಿರ್ಮಿಸಲಾಗಿದೆ. ಕಾರ್ಖಾನೆ ಆರಂಭಿಸುವಾಗಲೇ, ನಾವು ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು. ಘಟಕದಿಂದ ಈಶಾನ್ಯ ದಿಕ್ಕಿಗೆ 392 ಮೀಟರ್ ಅಂತರದಲ್ಲಿ ವಸತಿ ಪ್ರದೇಶವಿದೆ. ಪಶ್ಚಿಮ ದಿಕ್ಕಿನ 402 ಮೀಟರ್ ಅಂತರದಲ್ಲಿ ಸಿ.ಎನ್. ಹೊಸೂರು ಗ್ರಾಮವಿದೆ. 671 ಮೀಟರ್ ಅಂತರದಲ್ಲಿ ಸರ್ಕಾರಿ ಶಾಲೆ ಇದೆ. 722 ಮೀಟರ್ ದೂರದಲ್ಲಿ ಮುತ್ತೂರು ಗ್ರಾಮವಿದೆ’ ಎಂದು ಹೇಳಿದರು.

‘ಆದರೆ, ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಹಾಟ್ ಮಿಕ್ಸ್ ಘಟಕ ನಿರ್ಮಿಸಲಾಗಿದೆ. ಡಾಂಬರಿನ ವಾಸನೆ, ದೂಳಿನಿಂದಾಗಿ ಗ್ರಾಮದಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಕಾಯಿಲೆಗೆ ತುತ್ತಾಗುತ್ತಿದ್ದಾರೆ’ ಎಂದರು.

ಗ್ರಾಮದ ಮುಖಂಡ ಪುನೀತ್ ಮಾತನಾಡಿ, ಈ ಘಟಕದಿಂದ ಹೊರಬರುತ್ತಿರುವ ರಾಸಾಯನಿಕ ವಿಷಾನಿಲದಿಂದ ನಮ್ಮ ಗ್ರಾಮದಲ್ಲಿನ ಜನರು ಕೆಮ್ಮು, ಅಸ್ತಮ, ಕಫಾ ಸೇರಿ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಡಯಾಲಿಸಿಸ್ ರೋಗಿಗಳು ಕೂಡಾ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿ.ಎನ್.ಹೊಸೂರು ಗ್ರಾಮದ ವೇಣು, ಪುನೀತ್, ಮುನಿಕೃಷ್ಣಪ್ಪ, ಮಧು, ರವಿ, ರಮೇಶ್, ವೆಂಕಟೇಶ್, ಶಿವಕುಮಾರ್, ಗಜೇಂದ್ರ, ರಾಮಾಂಜಿ, ಅರವಿಂದ್ ರೆಡ್ಡಿ, ಬಾಲಕೃಷ್ಣ, ಮಹೇಶ್, ಡಿ.ಮುನಿಕೃಷ್ಣಪ್ಪ, ಮಂಜುನಾಥ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-16-142457721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.