ಶಿಡ್ಲಘಟ್ಟ: ನಗರದ ಕೆ.ಎಚ್.ಬಿ ಕಾಲೊನಿಯಲ್ಲಿ ಮಹಾಗಣಪತಿ, ಗಾಯಿತ್ರಿ ದೇವಿ, ಕಲ್ಯಾಣ ವೆಂಕಟೇಶ್ವರಸ್ವಾಮಿ ಹಾಗೂ ಶನೇಶ್ವರ ದೇವಾಲಯದಲ್ಲಿ ಶನೇಶ್ವರ ಜಯಂತಿ ಹಾಗೂ ಶ್ರೀಮತ್ ಕಲ್ಯಾಣ ರಥೋತ್ಸವವು ಶನಿವಾರ ನಡೆಯಿತು.

29ನೇ ವರ್ಷದ ಶನೇಶ್ವರ ಜಯಂತಿ ಅಂಗವಾಗಿ ದೇವಾಲಯದಲ್ಲಿನ ಮಹಾಗಣಪತಿ, ಗಾಯಿತ್ರಿ ದೇವಿ, ಕಲ್ಯಾಣ ವೆಂಕಟೇಶ್ವರಸ್ವಾಮಿ ಹಾಗೂ ಶನೇಶ್ವರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಲಾಯಿತು.

108 ಲೀಟರ್ ಕ್ಷೀರಾಭಿಷೇಕ ನೆರವೇರಿಸಿದ ಬಳಿಕ ಭಕ್ತರು ಸಾಮೂಹಿಕವಾಗಿ ಎಳ್ಳು ದೀಪ ಬೆಳಗಿದರು. ನಂತರ ಉತ್ಸವ ಮೂರ್ತಿಯನ್ನು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ತೇರನ್ನು ಎಳೆದರು.

ಪ್ರಧಾನ ಅರ್ಚಕ ವಿ.ಎನ್.ರಾಮ ಮೋಹನ್ ಶಾಸ್ತ್ರಿ ನೇತೃತ್ವದಲ್ಲಿ ಎಲ್ಲ ಪೂಜೆ, ಪುನಸ್ಕಾರಗಳು ನಡೆದವು.

ದೇವಾಲಯದ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ತೀರ್ಥಂಕರ, ಗೌರವಾಧ್ಯಕ್ಷ ಪ್ರಕಾಶ್, ಕೃಷ್ಣಪ್ಪ, ಮಣಿ, ನಾರಾಯಣಸ್ವಾಮಿ, ಶ್ರೀನಾಥ್, ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-16-270769684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.