ಶಿಡ್ಲಘಟ್ಟ: ನಗರದಲ್ಲಿ ಶನಿವಾರ ರಾತ್ರಿ ರೇಣುಕಾ ಯಲ್ಲಮ್ಮ ಹೂವಿನ ಕರಗವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕರಗ ಆಹ್ವಾನಿಸಲು ಮನೆಗಳ ಮುಂದೆ ಸಾರಿಸಿ ರಂಗೋಲಿಯನ್ನಿಟ್ಟಿದ್ದರು. ಎಲ್ಲಮ್ಮ ದೇಗುಲದ ಬಳಿ ನೂರಾರು ಭಕ್ತರು, ಪೂಜೆ ಹಾಗೂ ಕರಗ ಹೊರುವುದಕ್ಕೆ ಸಾಕ್ಷಿಯಾದರು. ಪ್ರತಿಯೊಂದು ಬೀದಿ, ಗಲ್ಲಿ, ಪ್ರಮುಖ ರಸ್ತೆಗಳು ಎಲ್ಲವನ್ನೂ ಹಾದು ಬರುವುದು ಈ ಕರಗದ ವಿಶೇಷ. ಹಾಗಾಗಿ ಪ್ರತಿಯೊಬ್ಬ ಮನೆಯವರೂ ಆರತಿ ಎತ್ತಿ, ಮಲ್ಲಿಗೆ ಹೂವು ಅರ್ಪಿಸಿ, ತೆಂಗಿನಕಾಯಿ ಒಡೆದು ಪೂಜಿಸಿದರು.

ನಗರದ ಪ್ರಮುಖ ಬೀದಿಗಳನ್ನು ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. ಸಂಗೀತ ಗೋಷ್ಠಿ ಹಾಗೂ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು. ಮಾರಮ್ಮ, ಪೂಜಮ್ಮ, ಗಂಗಮ್ಮ ಮೊದಲಾದ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ, ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ಯುಗಾದಿಯ ದಿನ ರಾತ್ರಿ ಹಸಿಕರಗದ ರಚನೆಯೊಂದಿಗೆ ಪ್ರಾರಂಭವಾದ ಕರಗದ ಸಂಪ್ರದಾಯಬದ್ಧವಾದ ಕಾರ್ಯ ಹೂವಿನ ಕರಗದೊಂದಿಗೆ ಮುಕ್ತಾಯಕ್ಕೆ ಬರುತ್ತದೆ. ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿಬಳೆ ತೊಡಿಸಿ, ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸುತ್ತಾರೆ. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಿದ್ದರು.

ವೀರಕುಮಾರರು ಅಲಗು ಸೇವೆ ಮಾಡುವುದರೊಂದಿಗೆ ಹಲಗೆ, ತಮಟೆ ವಾದ್ಯಗಳ ಸಮೇತ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು.

ಈ ಸಂಪ್ರದಾಯವನ್ನು ಹಿಂದಿನಿಂದ ವಹ್ನಿಕುಲ ಕ್ಷತ್ರಿಯರು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಪಿ.ಎಂ.ರಮೇಶ್ ಕರಗ ಹೊತ್ತಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-16-694206890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.