ಶಿಡ್ಲಘಟ್ಟ: ತಾಲ್ಲೂಕಿನ ಭಕ್ತರಹಳ್ಳಿಯ ಬಿಎಂವಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಬಿಎಂವಿ ಎಜುಕೇಷನ್ ಟ್ರಸ್ಟ್ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರ ಸೇವಾದಳದ 8 ದಿನಗಳ ಶಿಬಿರದ ಸಮಾರೋಪ ನಡೆಯಿತು.

ಶುಕ್ರವಾರ 80 ಶಿಬಿರಾರ್ಥಿಗಳು ಬಸವಾಪಟ್ಟಣದ ವೃತ್ತದಲ್ಲಿ ಎಂಟು ದಿನಗಳಿಂದ ಕಲಿತ ಕವಾಯತ್ತಿನ ಪ್ರದರ್ಶನ ನೀಡಿದರು.

ಬಿಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ರಾಷ್ಟ್ರ ಸೇವಾದಳದ ಶಿಬಿರ ಕೇವಲ ದೈಹಿಕ ಶಿಸ್ತಿನ ಕೇಂದ್ರಗಳಲ್ಲ. ಅವು ಸಮಾಜವಾದಿ ಸಿದ್ಧಾಂತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯೋಗಶಾಲೆಗಳಿದ್ದಂತೆ. ಸಮಾನತೆಯ ಅಭ್ಯಾಸ, ಶ್ರಮ ಗೌರವ, ವೈಜ್ಞಾನಿಕ ಮನೋಭಾವ ಮತ್ತು ಜಾತ್ಯತೀತತೆ, ಸಮೂಹ ಜೀವನ ಮತ್ತು ಸಹಕಾರ, ಸಾಮಾಜಿಕ ನ್ಯಾಯದ ಅರಿವು ಕಲಿತ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುತ್ತಾರೆ ಎಂದು ಹೇಳಿದರು.

ಬಿ.ವಿ.ಮುನೇಗೌಡ, ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರ ಶೆಟ್ಟಿ, ಪ್ರೊ.ಹನುಮಂತ, ಜಿ.ವಿ.ಸುಂದರ್, ಸಂತೆ ನಾರಾಯಣಸ್ವಾಮಿ, ರಾಷ್ಟ್ರ ಸೇವಾದಳದ ರಾಜ್ಯ ಅಧ್ಯಕ್ಷ ಶಂಕರ್ ಅಳಗಟ್ಟಿ, ಕೊಲ್ಲಾಪುರದ ರಾಹುಸಾಹೇಬ್ ಅಲಾಸ್, ಚಿದಾನಂದಮೂರ್ತಿ, ಬಿ.ಕೆ.ರಾಮಚಂದ್ರ, ಎಸ್.ನಂಜುಂಡಾರಾಧ್ಯ, ಹೇಮಂತ್ ಕುಮಾರ್, ದೇವರಾಜ್, ಪ್ರಶಾಂತ್ ಕುಮಾರ್, ಎನ್.ಎಸ್.ವೆಂಕಟೇಶ್, ಬಿ.ಸಿ.ಜಯಚಂದ್ರ, ಕ್ಯಾಂಪ್ ತರಬೇತುದಾರ ಬಾಬಾ ಸಾಹೇಬ್ ನಡಾಫ್, ಚಂದನ್ ಮಾತುಂಗೆ, ಸಾಗರ್ ಪಾಟೀಲ್, ಬಿಷ್ಣ ತಾಪ ಹಾಗೂ ಪೋಷಕರು, ಶಿಬಿರಾರ್ಥಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-16-1089541508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.