ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ಕೊರತೆ: ಫಲಿತಾಂಶ ಕುಸಿತ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ
Last Updated 4 ಆಗಸ್ಟ್ 2022, 4:42 IST
ಅಕ್ಷರ ಗಾತ್ರ

ಗುಡಿಬಂಡೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಉಪನ್ಯಾಸಕರ ಕೊರತೆ ಇದೆ. ಇದರಿಂದ ಗುಣಮಟ್ಟದ ಶಿಕ್ಷಣ ದೊರೆಯದೆ ಕಾಲೇಜಿನ ಫಲಿತಾಂಶ ಕುಸಿಯುತ್ತಿದೆ.

ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಗತ್ಯಗೆ ತಕ್ಕಂತೆ ಉಪನ್ಯಾಸಕರಿದ್ದು, ವಾಣಿಜ್ಯ ಮತ್ತು ಕಲಾ ವಿಭಾಗ ಉಪನ್ಯಾಸಕರಿಲ್ಲದೆ ಸೊರಗಿದೆ. ಇವೆರಡು ವಿಭಾಗಕ್ಕೆ 11 ಉಪನ್ಯಾಸಕರು ಅಗತ್ಯವಿದ್ದು, ಐದು ಉಪನ್ಯಾಸಕರು ಮಾತ್ರ ಬೋಧನೆ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬರು ಮಾತ್ರ ಕಾಯಂ ಉಪನ್ಯಾಸಕರು. ಕನ್ನಡ, ಇಂಗ್ಲಿಷ್‌, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಷಯಕ್ಕೆ ಉಪನ್ಯಾಸಕರ ಕೊರತೆ ಇದೆ. ಬದಲಿ ವ್ಯವಸ್ಥೆ ಮತ್ತು ಅತಿಥಿ ಉಪನ್ಯಾಸಕರ ಮೂಲಕ ಬೋಧನೆ
ಮಾಡಲಾಗುತ್ತಿದೆ.

ಈ ಕಾಲೇಜು ಹಲವು ವರ್ಷಗಳಿಂದ ಉಪನ್ಯಾಸಕರ ಕೊರತೆ ಎದುರಿಸುತ್ತಿರುವುದರಿಂದ ಫಲಿತಾಂಶ ಕುಸಿಯುತ್ತಲೇ ಬರುತ್ತಿದೆ. ಈ ಸಾಲಿನಲ್ಲಿ ಶೇ 30 ರಷ್ಟು ಫಲಿತಾಂಶ ಬಂದಿದೆ. ಕೋವಿಡ್‌ನಿಂದಾಗಿ ಎರಡು ಶೈಕ್ಷಣಿಕ ವರ್ಷಗಳಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿತ್ತು. ಅದರ ಹಿಂದಿನ ವರ್ಷಗಳಲ್ಲಿ ಶೇ 20–25 ರಷ್ಟು ಫಲಿತಾಂಶ ಬರುತ್ತಿತು ಎನ್ನುತ್ತಾರೆ ಇಲ್ಲಿನ ಉಪನ್ಯಾಸಕರೊಬ್ಬರು.

2021-22 ರಲ್ಲಿ ಮೂರು ವಿಭಾಗಗಳಿಂದ ಪಿಯು ಅಂತೀಮ ಪರಿಕ್ಷೇಗೆ 85 ವಿದ್ಯಾರ್ಥಿಗಳು ಹಾಜರಾಗಿ 25 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಸರಿಯಾಗಿ ಭೌತಿಕ ತರಗತಿ ನಡೆಯದೇ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುಸಿದಿದೆ. ಇದರ ನಡುವೆ ಉಪನ್ಯಾಸಕ ಕೊರತೆ ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ಪೆಟ್ಟು ನೀಡಬಹುದು ಎನ್ನುತ್ತಾರೆ ವಿದ್ಯಾರ್ಥಿಗಳ
ಪೋಷಕರು.

ಕಾಮರ್ಸ್ ವಿಭಾಗದಲ್ಲಿ ಹತ್ತಾರು ವರ್ಷಗಳಿಂದ ಉಪನ್ಯಾಸಕರ ಕೊರತೆಯಿಂದ ಶೇ 10 ರಷ್ಟು ಫಲಿತಾಂಶ ಕುಸಿತದಿದೆ. ಇದರಿಂದ ಪ್ರತಿ ವರ್ಷ ಪ್ರಥಮ ದರ್ಜೆ ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಇಳಿಮುಖ ಆಗುತ್ತಿದೆ. ಇದರಿಂದ ಪ್ರಥಮದರ್ಜೆ ಕಾಲೇಜು ಹಾಗೂ ಮೆಟ್ರೀಕ್ ನಂತರದ ವಸತಿ ನಿಲಯಗಳು ಮುಚ್ಚವ ಸ್ಥಿತಿ ಬರಬಹುದು ಎಂಬುದು ಪೋಷಕರ ಆತಂಕ.

ಪಟ್ಣಣದಲ್ಲಿರುವ ಏಕೈಕ ಸರ್ಕಾರಿ ಪದವಿ ಪೂರ್ವ ಕಾಲೇಜು ಇದಾಗಿದ್ದು, ಕಾಯಂ ಉಪನ್ಯಾಸಕರು ಕೊರತೆಯಿಂದ ವಿದ್ಯಾರ್ಥಿಗಳು ದಾಖಲಾಗಲುಆಸಕ್ತಿತೋರುತ್ತಿಲ್ಲ. ಅಲ್ಲದೆ ಫಲಿತಾಂಶ ಕುಸಿಯುತ್ತಿರುವ ಕಾರಣ 10ನೇ ತರಗತಿಯಲ್ಲಿ ಪಾಸಾದ ಶೇ 90 ರಷ್ಟು ವಿದ್ಯಾರ್ಥಿಗಳು ಬಾಗೇಪಲ್ಲಿ ಕಾಲೇಜುಗಳಿಗೆ, ಶೇ 10 ರಷ್ಟು ಚಿಕ್ಕಬಳ್ಳಾಪುರ ವಿವಿಧ ಕೋರ್ಸ್‌ಗಳಿಗೆ ದಾಖಲಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT