ಮಂಗಳವಾರ, ಮೇ 18, 2021
30 °C

ಯಡಿಯೂರಪ್ಪ ಯಾವತ್ತಾದ್ರು ಮುಂಬಾಗಿಲಿನ ಮುಖ್ಯಮಂತ್ರಿ ಆಗಿದ್ರಾ?: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕಬಳ್ಳಾಪುರ: ‘122 ಜನ ಗೆದ್ದು ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. ಯಡಿಯೂರಪ್ಪ ಯಾವತ್ತಾದರೂ ಮುಂಬಾಗಿಲಿನಿಂದ ಬಂದಿದ್ದಾರಾ? ಇಲ್ಲ. ಅವರು ಯಾವಾಗಲು ಹಿಂಬಾಗಿಲಿನ ಮುಖ್ಯಮಂತ್ರಿ,’ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದರು.

ಚಿಕ್ಕಬಳ್ಳಾಪುರದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ‘2008ರಲ್ಲಿ 9 ಜನ ಕೊಂಡುಕೊಂಡು ಮುಖ್ಯಮ ಈ ಸರಿ 17 ಜನರನ್ನು ಪಕ್ಷಾಂತರ ಮಾಡಿಸಿ ಮುಖ್ಯಮಂತ್ರಿ ಆಗಿದ್ದಾರೆ.  ನನಗೆ ತಿರುಕನ ಕನಸು ಕಾಣುತ್ತಿದ್ದಾನೆ ಎಂದು ಹೇಳುವುದಕ್ಕೆ ಅವರಿಗೆ ಯಾವ ನೈತಿಕತೆ ಇದೆ,’ ಎಂದು ಕಿಡಿಕಾಡಿದರು.

‘ದೇವೇಗೌಡರು ಏನು ಹೇಳಿದ್ದಾರೆ? ಮೈತ್ರಿ ಆಗಲ್ಲ ಎಂದಿದ್ದಾರೆ. ನಾವು ಆಗಲ್ಲ ಅಷ್ಟೇ,’ ಎಂದು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಕುರಿತು ಮಾತನಾಡಿದರು.

‘ಕಾಂಗ್ರೆಸ್‌ ಸೋಲುತ್ತದೆ ಎಂದು ಹೇಳುವ ಶ್ರೀನಿವಾಸಪ್ರಸಾದ್‌ ಅವರು ಬಿಜೆಪಿಗೆ ಹೋದ ನಂತರ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಏನಾದರು? ಅವರೆಲ್ಲ ನಮ್ಮ ಬಗ್ಗೆ ಮಾತನಾಡುತ್ತಾರೆ,’ ಎಂದು ವ್ಯಂಗ್ಯವಾಡಿದರು. 

‘ದನ, ಕುರಿ, ಎಮ್ಮೆಗಳೇನ್ರಿ ಅವರನ್ನು ನಾವು ಕಾಯುವುದಕ್ಕೆ. ಅವರು ಜನರ ಸೇವಕರಾಗಿರಬೇಕು. ಅವರಿಗೆ ಪ್ರಜಾಪ್ರಭತ್ವದ ಬಗ್ಗೆ ಗೊತ್ತಿದೆಯೇನ್ರಿ,’ ಎಂದು ಸುಧಾರಕ್‌ ಅವರನ್ನು ತರಾಟೆ ತೆಗೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು