ಗುರುವಾರ , ಏಪ್ರಿಲ್ 15, 2021
24 °C

ಅತಿವೇಗದ ಚಾಲನೆ: 1 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಿಲು: ಅತಿವೇಗ ಮತ್ತು ಅಜಾಗರೂಕತೆಯಿಂದ ಟೆಂಪೋ ಚಾಲನೆ ಮಾಡಿ ಜೀವಹಾನಿಗೆ ಕಾರಣನಾಗಿದ್ದ ವಾಹನ ಚಾಲಕ ರಮೇಶ್‌ಗೆ ಒಂದು ವರ್ಷ ಕಾರಾಗೃಹ ವಾಸ ಹಾಗೂ ₹10 ಸಾವಿರ ಜುಲ್ಮಾನೆ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಧೀಶ ಹಾಜಿ ಹುಸೇನಾ ಸಾಬಾ ಯಾದವಾಡ ತೀರ್ಪು ನೀಡಿದ್ದಾರೆ.

ಆರೋಪಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ 279 ಮತ್ತು 304(ಎ) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡಿರುವನು. ಅಭಿಯೋಜನಾ ಪಕ್ಷದವರು ಋಜುವಾತು ಪಡಿಸಿರುವುದರಿಂದ ದಂಡಪ್ರಕ್ರಿಯಾ ಸಂಹಿತೆ ಕಲಂ 255(2) ಅಡಿಯಲ್ಲಿ ಅಪರಾಧಿ ಎಂದು ತೀರ್ಮಾನಿಸಲಾಗಿದೆ. ಕಲಂ 304(ಎ)ರಡಿ ಅಪರಾಧಕ್ಕೆ ಶಿಕ್ಷೆ ವಿಧಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.