ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆಗೆ ಶ್ರೀಕೃಷ್ಣನ ಸಂದೇಶ ಅಗತ್ಯ

ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಶ್ರೀಕೃಷ್ಣ ಜಯಂತಿ ಆಚರಣೆ
Last Updated 23 ಆಗಸ್ಟ್ 2019, 13:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಶ್ರೀಕೃಷ್ಣನ ಸಂದೇಶಗಳು ಜೀವನ ಸುಧಾರಣೆಯ ಉಪದೇಶಗಳಾಗಿವೆ. ಸಾರ್ವತ್ರಿಕ ಸತ್ಯವಾದ ಗೀತೋಪದೇಶಗಳು ವಿಶ್ವದಲ್ಲಿಯೇ ತತ್ವಜ್ಞಾನ ಭರಿತವಾಗಿವೆ’ ಎಂದು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ತಿಳಿಸಿದರು.


ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


‘ಯಾವುದೇ ವ್ಯಕ್ತಿಯ ವ್ಯಕ್ತಿತ್ವ ನಿರ್ಧಾರವಾಗುವುದು ಬಾಲ್ಯದಲ್ಲಿ. ಬಾಲ್ಯದ ಬದುಕೇ ಮನುಷ್ಯನ ನಿರ್ಧಾರಣ ಶಕ್ತಿ. ಅದಕ್ಕೆ ಇಂದಿಗೂ ಕೃಷ್ಣನನ್ನು ಅವನ ಬಾಲ ಲೀಲೆಗಳಿಂದ ಗುರುತಿಸುತ್ತೇವೆ. ಮಕ್ಕಳಿಗೆ ವೇಷ ಭೂಷಣ ಹಾಕುತ್ತೇವೆ. ಧರ್ಮದ ರಕ್ಷಣೆಗೆ ಕಟಿಬದ್ಧವಾಗಿದ್ದ ಶ್ರೀಕೃಷ್ಣನ ಸಾಮಾಜಿಕ ನ್ಯಾಯ ಧರ್ಮದ ತಳಹದಿಯ ಮೇಲೆ ನಿಂತಿತ್ತು’ ಎಂದು ಹೇಳಿದರು.


‘ಉತ್ತರ ಕರ್ನಾಟಕ ಜನರು ನೆರೆಯ ಪ್ರವಾಹದ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಈ ಬಾರಿ ಕೃಷ್ಣ ಜಯಂತಿ ಸರಳವಾಗಿ ಆಚರಿಸಲಾಗಿದೆ. ಜಯಂತಿ ಆಚರಣೆಗೆ ಬಳಕೆ ಮಾಡುವ ಹಣವನ್ನೇ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್‌.ವೆಂಕಟಾಚಲಪತಿ, ಯಾದವ ಸಮುದಾಯ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT