ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಪೋಲನಾಯನಹಳ್ಳಿ ಬಳಿ ಇರುವ ಪೊಟಾರ್ಲಹಳ್ಳಿ ಬೂದುಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದೆಂದು ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪೊಟಾರ್ಲಹಳ್ಳಿ ಬೂದುಬೆಟ್ಟ ಸುಮಾರು 250 ಎಕರೆ ವಿಸ್ತೀರ್ಣವಿದ್ದು ರೈತರ ಜಮೀನುಗಳಿಗೆ ಹೊಂದಿಕೊಂಡಿದೆ. ಇಲ್ಲಿನ ಜನರು ತೀರ ಹಿಂದುಳಿದಿದ್ದು ಜೀವನೋಪಾಯಕ್ಕೆ ಕುರಿ, ಮೇಕೆ, ಜಾನುವಾರುಗಳನ್ಬು ಸಾಕಿ ಜೀವನ ಸಾಗಿಸುತ್ತಿದ್ದಾರೆ. ಹಸಿರಿನಿಂದ ಬೆಟ್ಟ ಕೂಡಿದ್ದು ಕಾಡು ಪ್ರಾಣಿಗಳು ವಾಸಿಸುವ ಸ್ಥಳವಾಗಿದೆ.

ಇಂತಹ ಜಾಗದಲ್ಲಿ ಕಲ್ಲುಗಣಿಗಾರಿಕೆ ಆರಂಭಿಸಲು ಅನುಮತಿ ನೀಡಿದರೆ ರೈತರು ಸರಣಿಯಾಗಿ ತಾಲ್ಲೂಕು ಕಚೇರಿ ಮುಂದೆ ನೇಣುಬಿಗಿದುಕೊಂಡು ಸಾಯುತ್ತೇವೆ. ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಕಲ್ಲುಗಣಿಗಾರಿಗೆ ಆರಂಭಿಸಲು ಬಿಡುವುದಿಲ್ಲ ಎಂದು ರೈತ ಮುಖಂಡ ಚಂಗವರಹಳ್ಳಿ ಗಂಗರಾಜು ಆಕ್ರೋಶ ವ್ಯಕ್ತಪಡಿಸಿದರು.

ಬೆಟ್ಟಕ್ಕೆ ಹತ್ತಿರವಾಗಿ ಐನೂರು ಮೀಟರ್ ಅಂತರದಲ್ಲಿ ಗ್ರಾಮ, ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆ ಇವೆ. ಗೋಮಾಳ ಜಾಗವಿದ್ದು ಸಾಕಷ್ಟು ರೈತರು ಕೃಷಿ ಅವಲಂಬಿತರಾಗಿದ್ದಾರೆ. ನೂರಾರು ಜಾನುವಾರುಗಳಿಗೆ ಮೇವಿನ ತಾಣವಾಗಿದೆ. ಕಲ್ಲು ಗಣಿಗಾರಿಕೆ ನಡೆಸಿದರೆ ಪರಿಸರ ನಾಶವಾಗುವುದರ ಜೊತೆ ಗ್ರಾಮಸ್ಥರ ನೆಮ್ಮದಿ ಹಾಳಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದರು.

ನೂರಾರು ಎಕರೆಯಲ್ಲಿ ಬೆಟ್ಟ ಗುಡ್ಡಗಳು ಇದ್ದು ನವಿಲು, ಚಿರತೆ, ಪಕ್ಷಿ, ಕರಡಿಗಳು ಆಶ್ರಯ ಪಡೆದಿವೆ. ಕಲ್ಲುಗಣಿಗಾರಿಕೆ ನಡೆಸಿದರೆ ಅವುಗಳ ಪ್ರಾಣಕ್ಕೂ ಕುತ್ತು ಬರುತ್ತದೆ ಹಾಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಕಲ್ಲುಗಣಿಗಾರಿಕೆ ನಡೆಯದಂತೆ ತಡೆಯಬೇಕು. ಒಂದು ವೇಳೆ ಹಣಬಲ, ದೌರ್ಜನ್ಯದಿಂದ ಗಣಿಗಾರಿಕೆ ನಡೆಸಲು ಮುಂದಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆಂದು ಸರ್ಕಾರಕ್ಕೆ ಎಚ್ಚರಿಸಿದರು.

ಮೇಸ್ತ್ರೀ ವೆಂಕಟರವಣಪ್ಪ, ವಕೀಲ ಕೃಷ್ಣಾರೆಡ್ಡಿ, ಬೈರಾರೆಡ್ಡಿ, ವೆಂಕಟರವಣಪ್ಪ, ಶ್ರೀನಿವಾಸ, ರಘುನಾಥರೆಡ್ಡಿ, ಪೋಲನಾಯಕನಹಳ್ಳಿ ನರಸಿಂಹಪ್ಪ, ಚೌಡರೆಡ್ಡಿ, ಆಂಜನಪ್ಪ, ಸೀಗಲಗುಟ್ಟ ಆಂಜಿನೇಯರೆಡ್ಡಿ, ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.