ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವು ಮೂಡಲಿ: ಗೋಪಾಲಗೌಡ ಕಲ್ವಮಂಜಲಿ

7
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮ

ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವು ಮೂಡಲಿ: ಗೋಪಾಲಗೌಡ ಕಲ್ವಮಂಜಲಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಇತ್ತೀಚಿನ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಕೊರತೆಯಿಂದಾಗಿ ಸಾಹಿತ್ಯದ ಕೃಷಿ ಸೊರಗುತ್ತಿರುವುದು ನಿರಾಶೆಯ ಸಂಗತಿ’ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ವಿಷಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಗರದ 16ನೇ ವಾರ್ಡ್ ನಿವಾಸಿ ಸರೋಜಮ್ಮ, ರಾಮಣ್ಣ ದಂಪತಿ ಮನೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ರೂಪಗೊಂಡರೂ ಬಹು ಹಿಂದಿನ ತನ್ನ ಮೂಲ ಹಿರಿಮೆಯನ್ನು ಕಳೆದುಕೊಂಡು ಕಳೆಗುಂದಿಲ್ಲ. ಇಲ್ಲಿನ ಪ್ರಾಕೃತಿಕ ಸಿರಿ ಮತ್ತು ಪ್ರಾಚೀನ ಕಾಲದಿಂದಲೂ ಉಚ್ಛ್ರಾಯ ಸ್ಥಿತಿಯಲ್ಲಿ ಬೆಳೆದು ಬಂದಿರುವ ಸಾಹಿತ್ಯ ಕೃಷಿ ಅನನ್ಯವಾದದ್ದು’ ಎಂದು ಸಾಹಿತಿ ಕಲ್ವಮಂಜಲಿ ಗೋಪಾಲಗೌಡ ಅಭಿಪ್ರಾಯಪಟ್ಟರು.

‘ಜಿಲ್ಲೆಯ ಪ್ರಾಚೀನ ಕವಿ ಕುಮುಂದೇಂದು ಮಹರ್ಷಿ ಚಿಕ್ಕಬಳ್ಳಾಪುರ ಸಮೀಪದ ಯಲುವಹಳ್ಳಿಯವರು ಎಂಬುದು ಹೆಮ್ಮೆಯ ಸಂಗತಿ. ಅಂತೆಯೇ ಹಿಂದಿನ ತಲೆಮಾರಿನ ಸಾಹಿತಿಗಳಾದ ತಿ.ತಾ.ಶರ್ಮಾ, ಸಿ.ಕೆ.ನಾಗರಾಜ್‌ ರಾವ್, ಬಾ.ರಾ.ಗೋಪಾಲ್, ರಘುಸುತ, ಚಿ.ಶ್ರೀನಿವಾಸರಾಜು ಮುಂತಾದ ಸಾಹಿತಿಗಳು ನಾಡಿನ ಸಾರಸತ್ವ ಲೋಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಯುವ ಜನರು ಸಹ ಸಾಹಿತ್ಯದ ಒಲುವು ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ‘ತೆಲುಗು ಪ್ರಭಾವದ ಈ ಭಾಗದಲ್ಲಿ ಕನ್ನಡದ ಹಿರಿಮೆ, ಗರಿಮೆಯನ್ನು ಪರಿಚಯಿಸುವ ಮೂಲಕ ಕಸಾಪ ಕನ್ನಡ ಕಟ್ಟುವ ಮತ್ತು ಬೆಳೆಸುವ ಸಂಕಲ್ಪದಲ್ಲಿ ಕ್ರಿಯಾಶೀಲವಾಗಿದೆ. ಮುಂದಿನ ದಿನಗಳಲ್ಲೂ ಈ ದಿಶೆಯಲ್ಲಿ ಮತ್ತಷ್ಟು ವಿವಿಧ ರೀತಿಯ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಸರೋಜಮ್ಮ, ರಾಮಣ್ಣ ದಂಪತಿಯನ್ನು ಸನ್ಮಾನಿಸಲಾಯಿತು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್, ಸಾಹಿತಿ ಎ.ಸಿ.ಇಂದುಮತಿ, ಜಿಲ್ಲಾ ಘಟಕದ ಕೋಶಾಧ್ಯಕ್ಷ ನಂಜುಂಡಪ್ಪ, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪ್ರವೀಣ್, ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ಪ್ರೇಮಲೀಲಾ ವೆಂಕಟೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !