ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಸೆ.27ರ ಭಾರತ್ ಬಂದ್‌ಗೆ ಸಂಘ ಸಂಸ್ಥೆಗಳ ಬೆಂಬಲ

Last Updated 20 ಸೆಪ್ಟೆಂಬರ್ 2021, 4:54 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಭಾರತ್‌ ಕಿಸಾನ್‌ ಮೋರ್ಚಾ ಸೆಪ್ಟೆಂಬರ್‌ 27ರಂದು ಕರೆ ನೀಡಿರುವ ಭಾರತ್‌ ಬಂದ್‌ಗೆ ತಾಲ್ಲೂಕಿನ ರಾಜಕೀಯ ಪಕ್ಷಗಳು, ಪ್ರಗತಿ, ದಲಿತ, ಕೃಷಿ ಕೂಲಿ ಕಾರ್ಮಿಕರ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ಪ್ರಜಾ ಸಂಘರ್ಷ ಸಮಿತಿ, ಜೆ.ಡಿ.ಎಸ್, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಜೀವಿಕ ಸಂಘಟನೆ, ಎಸ್. ಎಫ್.ಐ ಹಾಗೂ ಡಿವೈಎಫ್ಐ ಸಂಘಟನೆಗಳು,ಹಾಗೂ ಇತರೆ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಪಟ್ಟಣದ ಪರಿವೀಕ್ಷಣಾ ಮಂದಿರ ಆವರಣದಲ್ಲಿ ಭಾನುವಾರ ಕರ್ನಾಟಕ ಬಂದ್ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಮಾತನಾಡಿದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಲಕ್ಷ್ಮಣರೆಡ್ಡಿ ಮಾತನಾಡಿ, ‘ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವವರೆಗೂ ಹೋರಾಟ ಮುಂದುವರೆಯಲಿದೆ. ರಾಜ್ಯದಲ್ಲಿ ಸೆ.27 ರಂದು ಸಂಪೂರ್ಣ ಬಂದ್‌ ಆಗಬೇಕು. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಅಂಗಡಿಗಳು ಬಂದ್‌ ಆಗಬೇಕು’ ಎಂದು ಮನವಿ ಮಾಡಿದರು.

‘ಇನ್ನೂ ಕೆಲ ಸಂಘಟನೆಗಳೊಂದಿಗೆ ಚರ್ಚೆ ಮಾಡಲು ಸೆ.23ರಂದು ಪುನಃ ಸಭೆಯನ್ನು ಮತ್ತೆ ಕರೆಯಲಾಗುವುದು. ಇತರೆ ಸಂಘ ಸಂಸ್ಥೆಗಳ ಅವರೂ ಬೆಂಬಲ ನೀಡುವ ಇದೆ’ ಎಂದು ತಾಲ್ಲೂಕು ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಮಹಮದ್ ಎಸ್ ನೂರುಲ್ಲಾ ತಿಳಿಸಿದರು.

ಪಿ.ಎಸ್‌. ಎಸ್. ಮುಖಂಡ ಚನ್ನರಾಯಪ್ಪ, ಗೋಪಾಲಕೃಷ್ಣ, ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ, ತಾಲ್ಲೂಕು ಕರವೇ ಅಧ್ಯಕ್ಷ ಹರೀಶ್, ದಲಿತ ಸಂಘರ್ಷ ಸಮಿತಿ ಮೂರ್ತಿ, ಜೀವಿಕ ಸಂಘಟನೆ ಮುಖಂಡ ಅಂಜನಪ್ಪ, ಚೌಡಯ್ಯ, ಎಸ್. ಎಫ್. ಐ ಮುಖಂಡ ಸತೀಶ್, ಹಸಿರು ಸೇನೆ ರಾಜ್ಯ ಸಂಚಾಲಕಿ ಸಿ.ಉಮಾ, ವೆಂಕಟರಾಮಯ್ಯ, ಟಿ.ರಘುನಾಥ್ ರೆಡ್ಡಿ, ಈಶ್ವರ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT