ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಎಣಿಕೆ ಆರಂಭ: 11 ರಾಜ್ಯ; 11 ವಿಧಾನಸಭಾ ಕ್ಷೇತ್ರ, 4 ಲೋಕಸಭಾ ಕ್ಷೇತ್ರಗಳ ಫಲಿತಾಂಶ

ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್‌ನ ಮುನಿರತ್ನ ಮುನ್ನಡೆ
Last Updated 31 ಮೇ 2018, 4:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ಸೇರಿ ಒಟ್ಟು 11 ರಾಜ್ಯಗಳ 11 ವಿಧಾನಸಭಾ ಕ್ಷೇತ್ರಗಳು(10 ಉಪಚುನಾವಣೆ) ಹಾಗೂ 4 ಲೋಕಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ಗುರುವಾರ ಆರಂಭವಾಗಿದೆ.

ಮೈಸೂರು ರಸ್ತೆಯ ಹಲಗೆ ವಡೇರಹಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಆರ್‌.ಆರ್‌.ನಗರ ಕ್ಷೇತ್ರದ ಮತಎಣಿಕೆ ನಡೆಯುತ್ತಿದೆ. ಮೊದಲಿಗೆ 550 ಅಂಚೆ ಮತಗಳ ಎಣಿಕೆ ಕಾರ್ಯ ನಡೆದಿದೆ.

ಎರಡನೇ ಸುತ್ತಿನ ಮತಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ನ ಮುನಿರತ್ನ 8680 ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌–16,581; ಜೆಡಿಎಸ್‌–3,606; ಬಿಜೆಪಿ–7,901 ಮತ ಗಳಿಸಿವೆ. ಪಕ್ಷೇತರ ಅಭ್ಯರ್ಥಿಗಳಲ್ಲಿ ಹುಚ್ಚ ವೆಂಕಟ್‌ ಅಧಿಕ ಮತ ಪಡೆದಿದ್ದಾರೆ. ಎರಡೂ ಸುತ್ತುಗಳಿಂದ 110 ಮತಗಳು ದೊರೆತಿವೆ. ಒಟ್ಟು 322 ನೋಟಾ ಮತಗಳು ದಾಖಲಾಗಿವೆ. 

ಚುನಾವಣಾ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಮೇ 15ರಂದು ನಡೆಯಬೇಕಿದ್ದ ಮತದಾನವನ್ನು ಮುಂದೂಡಲಾಗಿತ್ತು. ಇದೇ 28ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಶೇ 54.20 ರಷ್ಟು ಮತದಾನ ನಡೆದಿತ್ತು.

ಮಾಜಿ ಶಾಸಕರಾದ ಕಾಂಗ್ರೆಸ್‌ನ ಮುನಿರತ್ನ, ಬಿಜೆಪಿಯ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‌ನ ಜಿ.ಎಚ್. ರಾಮಚಂದ್ರ ಕಣದಲ್ಲಿದ್ದಾರೆ. ನಟ ಹುಚ್ಚ ವೆಂಕಟ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಚುನಾವಣೆಗಳಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿವೆ.

10 ವಿಧಾನಸಭಾ ಕ್ಷೇತ್ರ, 4 ಲೋಕಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ:

ಲೋಕಸಭೆಗೆ ಕರ್ನಾಟಕದ ಶಿವಮೊಗ್ಗದಿಂದ ಆಯ್ಕೆಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಮತ್ತು ಬಳ್ಳಾರಿಯಿಂದ ಆಯ್ಕೆಯಾಗಿದ್ದ ಶ್ರೀರಾಮುಲು ಅವರ ರಾಜೀನಾಮೆಯಿಂದಾಗಿ ಬಿಜೆಪಿಯ ಸದಸ್ಯ ಬಲ ಸರಳ ಬಹುಮತದ 272ರಿಂದ ಕೆಳಕ್ಕೆ ಇಳಿದಿದೆ. ಭಂಡಾರಾ–ಗೋಂದಿಯಾ ಮತ್ತು ಕೈರಾನಾ ಲೋಕಸಭಾ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಉಳಿದ ಎರಡು ಲೋಕಸಭಾ ಕ್ಷೇತ್ರಗಳಲ್ಲಿಯೂ ವಿರೋಧ ಪಕ್ಷಗಳ ನಡುವೆ ‘ಒಪ್ಪಂದ’ ಆಗಿದೆ.

ಹಾಗಾಗಿ,  ಮಹಾರಾಷ್ಟ್ರದ ಪಾಲ್ಘರ್‌ ಮತ್ತು ಭಂಡಾರಾ–ಗೋಂದಿಯಾ, ಉತ್ತರ ಪ್ರದೇಶದ ಕೈರಾನಾ ಹಾಗೂ ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಕ್ಷೇತ್ರಗಳ ಮತಎಣಿಕೆ ಕುತೂಹಲ ಕೆರಳಿಸಿದೆ.

ಹತ್ತು ವಿಧಾನಸಭಾ ಕ್ಷೇತ್ರಗಳು

ಮಹೇಸ್ತಲಾ (‍ಪಶ್ಚಿಮ ಬಂಗಾಳ)

ಗೋಮಿಯಾ (ಜಾರ್ಖಂಡ್‌)

ಸಿಲಿ (ಜಾರ್ಖಂಡ್‌ )

ಜೋಕಿಹಾತ್‌ (ಬಿಹಾರ)

ಅಂಪತಿ (ಮೇಘಾಲಯ)

ಶಾಹ್‌ಕೋಟ್‌ (ಪಂಜಾಬ್‌)

ಪಲೂಸ್‌ ಕಡೆಗಾವ್‌ (ಮಹಾರಾಷ್ಟ್ರ)

ಚೆಂಗನ್ನೂರು (ಕೇರಳ)

ಥರಾಲಿ (ಉತ್ತರಾಖಂಡ)

ನೂರ್‌ಪುರ (ಉತ್ತರ ಪ್ರದೇಶ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT