ಶನಿವಾರ, ಜೂನ್ 19, 2021
27 °C

ಶಿಡ್ಲಘಟ್ಟ: ಯುಗಾದಿ ಸ್ವಾಗತಿಸುವ ಟಬೂಬಿಯಾ ರೋಸಿಯಾ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ‪ಯುಗಾದಿ ಅಂದರೆ....‪ವಸಂತನ ಆಗಮನ, ಬೇವು-ಬೆಲ್ಲ ಸೇವನೆ, ‪ಚಿಗುರಿನ ಪಲ್ಲವಿ, ‪ಜೀವಸಂಕುಲದ ಸಂತಸ. ಯುಗಾದಿಯನ್ನು ಪ್ರಕೃತಿಯ ಹಬ್ಬ ಎಂದೇ ಕರೆಯುತ್ತಾರೆ. ನಿಸರ್ಗವು ವಿವಿಧ ರೀತಿಯಲ್ಲಿ ವಸಂತಮಾಸದಲ್ಲಿ ಬರುವ ಯುಗಾದಿ ಹಬ್ಬವನ್ನು ಸ್ವಾಗತಿಸುತ್ತದೆ.

ಶಿಡ್ಲಘಟ್ಟದ ಬೆಂಗಳೂರು ರಸ್ತೆಯಲ್ಲಿ ತಾಲ್ಲೂಕಿನ ಗಡಿಯಲ್ಲಿರುವ ಅಂಗತಟ್ಟಿ ಗೇಟ್ ಬಳಿ ಹಲವು ಟಬೂಬಿಯಾ ರೋಸಿಯಾ ಮರಗಳು ತಿಳಿಗುಲಾಬಿ ಹೂಗಳೊಂದಿಗೆ ದಾರಿಯಲ್ಲಿ ಹೋಗುವವರನ್ನು ಮತ್ತು ಯುಗಾದಿಯನ್ನು ಸ್ವಾಗತಿಸುತ್ತಿದೆ. ವಿವಿಧೆಡೆ ಆಲದ ಮರಗಳು ಕೆಂಬಣ್ಣದ ಹಣ್ಣುಗಳಿಂದ ತುಂಬಿಕೊಂಡು ಹಕ್ಕಿಗಳ ಕಲರವವನ್ನು ಏರ್ಪಡಿಸಿದೆ. ನೇರಳೆ ಬಣ್ಣದ ಜಖರಂಡ ಹೂಗಳು, ಅಲ್ಲಲ್ಲಿ ಉಳಿದಿರುವ ಗಾಢ ಹಳದಿ ಬಣ್ಣದ ಗಂಟೆ ಹೂಗಳು, ಪರಿಮಳ ಸೂಸುವ ಕಾಡಮಲ್ಲಿಗೆ, ಚಿಗುರಿದ ಮಾವು ಮತ್ತು ಹುಣಸೆ ಕೂಡ ವಸಂತದ ಧ್ವನಿಯಾಗಿವೆ.

‘1908ರಲ್ಲಿ ಲಾಲ್‌ಬಾಗ್‌ ಕ್ಯುರೇಟರ್‌ ಆಗಿ ಬಂದವರು ಕ್ರುಂಬಿಗಲ್‌. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ವಿವಿಧ ಬಡಾವಣೆಗಳಿಗೆ, ಮನೆಗಳಿಗೆ ಕೊಂಡೊಯ್ದರು. ಅವರು ಸರಣಿ ಹೂ ಬಿಡುವ ಮರಗಳನ್ನು ನೆಡುವುದನ್ನು ಪ್ರಾರಂಭಿಸಿದರು. ಟಬೂಬಿಯಾ ಜಾತಿಯ ಮರಗಳನ್ನು ಸಾಕಷ್ಟು ನೆಡಲು ಪ್ರೋತ್ಸಾಹಿಸಿದರು. ಅಂಗತಟ್ಟಿ ಗೇಟ್‌ನಲ್ಲಿರುವ ಟಬೂಬಿಯಾ ರೋಸಿಯಾ ಮರಗಳನ್ನು ಹಲವು ವರ್ಷಗಳ ಹಿಂದೆ ನಾನೇ ನೆಟ್ಟಿದ್ದೆ. ಸಾಧ್ಯವಾದ ಕಡೆಗಳಲ್ಲೆಲ್ಲಾ ಟಬೂಬಿಯಾ ಜಾತಿಯ ಮರಗಳ ಬೀಜಗಳನ್ನು ಹಾಕುತ್ತಿರುತ್ತೇನೆ’ ಎಂದು ತೋಟಗಾರಿಕೆ ಸಮಾಲೋಚಕ ಮತ್ತು ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು