ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸೋಂಕಿತರ ಸಂಖ್ಯೆ 1,358ಕ್ಕೆ ಏರಿಕೆ

Last Updated 25 ಜುಲೈ 2020, 13:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 100 ಕೋವಿಡ್‌ 19 ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ಧಾರೆ. ಈ ಮೂಲಕ ಕೋವಿಡ್‌ ಪ್ರಕರಣಗಳ ಸಂಖ್ಯೆ 1,358ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಶನಿವಾರದ ವರೆಗೆ 36,373 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿದ್ದು, ಈ ಪೈಕಿ 33,966 ಮಂದಿ ವರದಿ ನೆಗೆಟಿವ್‌ ಬಂದಿದೆ. 4,719 ಜನರ ವರದಿ ಬರಬೇಕಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪೈಕಿ ಈವರೆಗೆ 29 ಜನರು ಮೃತಪಟ್ಟಿದ್ದು, 621 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಗೊಂಡಿದ್ದಾರೆ. ಶನಿವಾರ 32 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 708 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಟ್ಟಿ..

ಜಿಲ್ಲೆಯಲ್ಲಿ ತಾಲ್ಲೂಕುವಾರು ಕೋವಿಡ್‌ ಪ್ರಕರಣಗಳ ವಿವರ

ತಾಲ್ಲೂಕು;ಜುಲೈ25;ಒಟ್ಟು;ಬಿಡುಗಡೆ;ಒಟ್ಟು ಬಿಡುಗಡೆ;ಸಕ್ರಿಯ ಪ್ರಕರಣ;ಸಾವು

ಚಿಕ್ಕಬಳ್ಳಾಪುರ;16;457;13;154;294;13

ಬಾಗೇಪಲ್ಲಿ; 21;184;4;84;99;2

ಚಿಂತಾಮಣಿ;16;210;7;118;90;2

ಗೌರಿಬಿದನೂರು;8;326;3;216;96;9

ಗುಡಿಬಂಡೆ;18;58;1;4;53;1

ಶಿಡ್ಲಘಟ್ಟ; 21;123;4;45;76;2

ಒಟ್ಟು;100;1,358;32;621;708;29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT