ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನೇಶ್ವರಸ್ವಾಮಿ ಬಸಪ್ಪನವರ ಮೆರವಣಿಗೆ

Last Updated 27 ಫೆಬ್ರುವರಿ 2021, 3:04 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರಿನಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ರೈತ ಯುವಕ ಸಂಘದ ವತಿಯಿಂದ ಎರಡು ದಿನ ನವದೇವತೆಗಳ ಉತ್ಸವ ಹಾಗೂ ಶನೇಶ್ವರಸ್ವಾಮಿ ಬಸಪ್ಪನವರ ಮೆರವಣಿಗೆ ಆಯೋಜಿಸಲಾಗಿತ್ತು.

ಮೇಲೂರಿನ ಸುಪ್ರಸಿದ್ಧ ಗಂಗಾದೇವಿ ಆದಿಯಾಗಿ ಉಮಾಮಹೇಶ್ವರ, ಚನ್ನಕೇಶವ, ಸುಗ್ಗಲಮ್ಮದೇವಿ, ಚೌಡೇಶ್ವರಿದೇವಿ, ಮುನೇಶ್ವರಸ್ವಾಮಿ, ಸಪ್ಪಲಮ್ಮದೇವಿ, ನಗರದೇವತೆ ಅಣ್ಣಮ್ಮ, ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿದೇವಿಯವರ ನವದೇವತೆಗಳ ಉತ್ಸವ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಆನೇಕಲ್ ತಾಲ್ಲೂಕಿನ ಪ್ರಸಿದ್ಧ ಮಂಚನಹಳ್ಳಿ ಬಸಪ್ಪನವರು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಾ ಭಕ್ತಗಣಕ್ಕೆ ಆಶೀರ್ವಾದ ನೀಡಿದ್ದು ವಿಶೇಷವಾಗಿತ್ತು. ಗ್ರಾಮದ ಮನೆಗಳಲ್ಲಿ ಪೂಜೆಗೆ ಕೊಟ್ಟು, ಪಾದ ಪೂಜೆ ಮಾಡುವ ಮೂಲಕ ಭಕ್ತಿ ಭಾವದಿಂದ ನಮಿಸಿದರು. ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬಸಪ್ಪ ಗ್ರಾಮದ ಕೆಲ ಮನೆಗಳಿಗೆ ಪ್ರವೇಶಿಸಿ ಮನೆಯವರನ್ನು ಆಶೀರ್ವದಿಸಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಭಕ್ತಾದಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವೀರಗಾಸೆ, ಡೋಲು, ಮಂಗಳ ವಾದ್ಯಗಳು, ಕರಡಿ ಸಮ್ಮೇಳ ಮೆರವಣಿಗೆಯಲ್ಲಿ ಮೆರುಗು ತಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT