ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿಯಲ್ಲಿ ಉದ್ಯಾನಗಳೇ ಮಾಯ!

ಉದ್ಯಾನಕ್ಕೆ ಮೀಸಲಿಟ್ಟ ನಿವೇಶನಗಳ ಒತ್ತುವರಿ; ನಿರ್ವಹಣೆ ಕೊರತೆಯಿಂದ ಅಧ್ವಾನ
Last Updated 15 ನವೆಂಬರ್ 2021, 4:24 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಉದ್ಯಾನಗಳು ಇವೆಯೋ ಇಲ್ಲವೊ...ಹೀಗೊಂದು ಅನುಮಾನ ನಾಗರಿಕರನ್ನು ಕಾಡುತ್ತಿದೆ. ಉದ್ಯಾನಕ್ಕೆ ಮೀಸಲಿಟ್ಟ ಜಾಗಗಳು ಒತ್ತುವರಿಗೆ ಒಳಗಾಗಿವೆ. ಸದ್ಯ ಇರುವ ಮೂರು ಉದ್ಯಾನಗಳಲ್ಲಿಕನಿಷ್ಠ ಸೌಲಭ್ಯಗಳು ಇಲ್ಲ.

ನಗರ ಹೊರವಲಯದಲ್ಲಿ ಇಕೊ ಉದ್ಯಾನ, ಡಾ.ಎಚ್.ಎನ್.ಉದ್ಯಾನ ಹಾಗೂ ರೆಡ್ಡಿಕೆರೆ ಬಳಿ ಉದ್ಯಾನಗಳು ಇವೆ. ಆದರೆ ಇವು ಸೂಕ್ತ ನಿರ್ವಹಣೆ, ಕನಿಷ್ಠ ಸೌಲಭ್ಯಗಳು ಇಲ್ಲದೆ ನಲುಗಿವೆ. ವಾಯುವಿಹಾರಿಗಳು ತೊಂದರೆ ಅನುಭವಿಸಬೇಕಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿವೆ. ನ್ಯಾಷನಲ್ ಕಾಲೇಜಿನಿಂದ ಸಿವಿಲ್ ನ್ಯಾಯಾಲಯದವರಿಗೆ ಹಾಗೂ ಕೊತ್ತಪಲ್ಲಿಯಿಂದ ರಾಮಸ್ವಾಮಿಪಲ್ಲಿಯವರಿಗೂ ಪಟ್ಟಣವ್ಯಾಪಿಸಿದೆ. 22 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲ್ಲೂಕು ಕೇಂದ್ರವಾದರೂ ಒಂದು ಸುಸಜ್ಜಿತ, ಉತ್ತಮವಾದ ಉದ್ಯಾನ ಇಲ್ಲ. ಈಗ ಇರುವ ಮೂರು ಉದ್ಯಾನಗಳು ಸಹ ನಗರದ ಒಳಗೆ ಇಲ್ಲ.

ಪಟ್ಟಣಕ್ಕೆ ಹೊಂದಿಕೊಂಡಂತೆ ಉದ್ಯಾನ ನಿರ್ಮಿಸಲು ಜಾಗದ ಕೊರತೆ ಇದೆ. ಸಮುದಾಯ ಭವನ, ಅಂಗನವಾಡಿ ಕೇಂದ್ರ, ಸಾರ್ವಜನಿಕ ಶೌಚಾಲಯ, ಇಂದಿರಾ ಕ್ಯಾಂಟೀನ್‌ಗೆ ಜಾಗದ ಸಮಸ್ಯೆ ಇದೆ. ಜೊತೆಗೆ ಉದ್ಯಾನಕ್ಕೆ ಅವಶ್ಯ ಜಾಗವು ಇಲ್ಲ. ಇದರಿಂದ ಪಟ್ಟಣದಲ್ಲಿ ಉದ್ಯಾನಗಳು ನಗಣ್ಯ ಎನ್ನುವ ಸ್ಥಿತಿಯಲ್ಲಿವೆ.ಜನರು ಮುಖರಸ್ತೆ, ಕ್ರೀಡಾಂಗಣ, ನ್ಯಾಷನಲ್ ಕಾಲೇಜಿನ ಆಟದ ಮೈದಾನವನ್ನು ವಾಯುವಿಹಾರಕ್ಕೆ ಅವಲಂಬಿಸಿದ್ದಾರೆ.

ಪುರಸಭಾ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಕಡೆಉದ್ಯಾನಗಳಿಗೆ ನಿವೇಶನಗಳನ್ನು ಮೀಸಲಿಡಲಾಗಿದೆ. ಆದರೆ ಅವು ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಗೆ ಒಳಗಾಗಿವೆ. ಇಲ್ಲಿ ಮನೆಗಳನ್ನು ನಿರ್ಮಿಸಿದ್ದಾರೆ. ಉಳಿದ ಕೆಲವು ಉದ್ಯಾನದನಿವೇಶನಗಳಿಗೆ ತಡೆಗೋಡೆ, ಮುಳ್ಳಿನ ತಂತಿಗಳನ್ನು ಸಹ ಅಳವಡಿಸಿಲ್ಲ. ಈ ನಿವೇಶನಗಳನ್ನೇ ಪುರಸಭೆಯವರು ಕೆಲವರಿಗೆ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ
ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪಟ್ಟಣದ 23 ವಾರ್ಡ್‍ಗಳಲ್ಲಿ ಇರುವ ಉದ್ಯಾನಗಳಿಗೆ ಮೀಸಲಿಟ್ಟಿರುವ ನಿವೇಶನಗಳ ಮಾಹಿತಿ ನೀಡುವಂತೆ ಪುರಸಭೆ ಸದಸ್ಯರು ಕೇಳಿದರೂ, ಅಧಿಕಾರಿಗಳು ಸರ್ವೆ ಮಾಡುತ್ತಿದ್ದೇವೆ ಎಂದು ಉತ್ತರಿಸುತ್ತಾರೆ. ಅಧಿಕಾರಿಗಳ ಬಳಿಯೇ ನಿವೇಶನಗಳ ಮಾಹಿತಿಯ ಕೊರತೆ ಇದೆ.

ಐತಿಹಾಸಿಕ ಜಡಲಭೈರವೇಶ್ವರ ದೇವಾಲಯದ ಬಳಿ ಇಕೊ ಉದ್ಯಾನ‌ ನಿರ್ಮಿಸಲಾಗಿದೆ. ವಿವಿಧ ಜಾತಿಯ ಗಿಡಗಳು, ಮರಗಳನ್ನು ಬೆಳೆಸಲಾಗಿದೆ. ನೀರಿನ ಕಾರಂಜಿ ಇದೆ. ಆದರೆ ಕಾರಂಜಿಯಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ. ಕೂರಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲ. ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿವೆ. ವಾಯುವಿಹಾರ ಮಾಡಲು ಆಗುತ್ತಿಲ್ಲ. ಬೆಳಿಗ್ಗೆ, ‌ಸಂಜೆ ಮಾತ್ರ ಮುಖ್ಯದ್ವಾರದ ಬಾಗಿಲು ತೆರೆಯಲಾಗುತ್ತದೆ.

ಇಲ್ಲಿ ನಿವೃತ್ತ ನೌಕರರು, ವಾಯುವಿಹಾರಿಗಳು, ಜನರು ವಿಶ್ರಾಂತಿ ಪಡೆಯಲು ಆಗುತ್ತಿಲ್ಲ. ಪಟ್ಟಣಕ್ಕೆ ಈ ಉದ್ಯಾನ ದೂರ
ಇರುವುದರಿಂದ, ವೃದ್ಧರು, ವಾಯುವಿಹಾರಿಗಳು ಉದ್ಯಾನಕ್ಕೆ ಹೋಗಲು ಆಗುತ್ತಿಲ್ಲ.

ಕೊರ್ಲಕುಂಟೆ ಪಕ್ಕದ ಪುರಸಭೆಯ ಜಾಗದಲ್ಲಿ ಡಾ.ಎಚ್.ಎನ್.ಉದ್ಯಾನವಿದೆ. ಉದ್ಯಾನದ ಮಧ್ಯದಲ್ಲಿ ಗೋಡೆ ನಿರ್ಮಿಸಿ ಡಾ.ಎಚ್.ಎನ್ ಅವರ ಪುತ್ಥಳಿ ಇಡಲಾಗಿದೆ. ಆದರೆ ಉದ್ಯಾನದಲ್ಲಿ ಕಳೆ, ಮುಳ್ಳಿನ ಗಿಡಗಳು ಬೆಳೆದಿವೆ. ಹಾವು-ಚೇಳುಗಳ ಕಾಟ ಹೆಚ್ಚಾಗಿದೆ.‌ ಜನರು ಇಲ್ಲಿತ್ಯಾಜ್ಯ ಸುರಿಯುತ್ತಿದ್ದು ವಾತಾವರಣ ಕಲುಷಿತವಾಗಿದೆ. ಉದ್ಯಾನಅನೈತಿಕ ಚಟುವಟಿಕೆಗಳ ತಾಣವಾಗಿದೆ.ಎಚ್‌.ಎನ್.ಉದ್ಯಾನದಲ್ಲಿಗಿಡಗಳನ್ನು ಬೆಳೆಸಿಲ್ಲ.

ಗೂಳೂರು ರಸ್ತೆಯ ರೆಡ್ಡಿ ಕೆರೆಕಟ್ಟೆ ಪಕ್ಕದ ಉದ್ಯಾನದ್ದೂ ಇದೇ ಸ್ಥಿತಿ. ಇಲ್ಲಿಯೂ ಕುಳಿತುಕೊಳ್ಳಲು ಆಸನಗಳು, ಪಾದಚಾರಿ ರಸ್ತೆ ಇಲ್ಲ. ಮಕ್ಕಳ ಆಟಿಕೆಗಳು ಇಲ್ಲ. ಮುಖ್ಯದ್ವಾರದ ಗೇಟ್ ಮುರಿದುಅನೇಕ ವರ್ಷಗಳು ಕಳೆದರೂ ದುರಸ್ತಿ ಆಗಿಲ್ಲ. ನಿರ್ಜನ ಪ್ರದೇಶ ಇದಾಗಿರುವುದರಿಂದ ವಾಯುವಿಹಾರಿಗಳು ಇಲ್ಲಿಗೆ ಬರುತ್ತಿಲ್ಲ. ಪುರಸಭೆಯಿಂದ ಉದ್ಯಾನ ಅಭಿವೃದ್ಧಿಗೆ ಕೋಟ್ಯಂತರ ಹಣ ವ್ಯಯ ಮಾಡಲಾಗಿದೆ.
ಆದರೆ ಅದು ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT