ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗಜೀವನ ರಾಂ ಭವನಕ್ಕೆ ಸ್ಥಳವಿಲ್ಲ’

ಪರಿಶಿಷ್ಟರ ವಂಚಿಸುತ್ತಿರುವ ಬಿಜೆಪಿ; ದಲಿತ ಸಂಘರ್ಷ ಸಮಿತಿ ಮುಖಂಡರ ಆರೋಪ
Last Updated 6 ಡಿಸೆಂಬರ್ 2022, 4:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರದಲ್ಲಿ ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಏಪ್ರಿಲ್‌ನಲ್ಲಿ ಭೂಮಿ ಪೂಜೆ ನೆರವೇರಿಸಿದರೂ ಇಂದಿಗೂ ಭವನ ನಿರ್ಮಾಣ ಆರಂಭವಾಗಿಲ್ಲ. ಎಲ್ಲಿನಿರ್ಮಾಣವಾಗುತ್ತದೆ ಎನ್ನುವುದೂ ಗೊತ್ತಿಲ್ಲ’ ಎಂದುದಲಿತ ಸಂಘರ್ಷ ಸಮಿತಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯಕೆ.ಸಿ. ರಾಜಾಕಾಂತ್ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ ಭವನ ನಿರ್ಮಾಣಕ್ಕೆ ₹4 ಕೋಟಿ ಹಣವಿದೆ. ಈ ಬಗ್ಗೆ ನಾವು ಪ್ರಶ್ನಿಸಿದರೆ ದಲಿತ ಸಮುದಾಯದ ಮಾಜಿ ಶಾಸಕರು ಸೇರಿದಂತೆ ಇತರರು ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿಯಹೆಸರಿನಲ್ಲಿ ಪರಿಶಿಷ್ಟರನ್ನು ವಂಚಿಸುತ್ತಿದೆ.ಚಿತ್ರಾವತಿ ಬಳಿಅಂಬೇಡ್ಕರ್ ಭವನಕ್ಕೆ ನೀಡಿರುವ ಜಾಗದ ವಿವಾದ ನ್ಯಾಯಾಲಯದಲ್ಲಿ ಇದೆ. ಹೈಕೋರ್ಟ್ ಆದೇಶದ ಪ್ರಕಾರ ಮುಂದಿನ ಕ್ರಮ ವಹಿಸುವುದಾಗಿ ಹೇಳುತ್ತಿದ್ದಾರೆ. ವಾಲ್ಮೀಕಿ ಭವನಕ್ಕೆ ನೀಡಿರುವ ಜಾಗವೂ ನ್ಯಾಯಾಲಯದಲ್ಲಿ ಇದೆ. ಭೋವಿ ಸಮಾಜಕ್ಕೆ ನೀಡಿರುವ ಜಾಗಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಹೀಗೆ ಎಷ್ಟು ಜನರನ್ನು ಮತ್ತು ಸಮುದಾಯಗಳನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ವಾಲ್ಮೀಕಿ ,ಅಂಬೇಡ್ಕರ್, ಭೋವಿ, ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ.ಪರಿಶಿಷ್ಟ ಜಾತಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಪರಿಶಿಷ್ಟ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿಸುವ ಕೆಲಸ ನಡೆಯುತ್ತಿದೆ. ನಾಮಕಾವಸ್ತೆಗೆ ಅಂಬೇಡ್ಕರ್,ವಾಲ್ಮೀಕಿ, ಓಬವ್ವ, ಕನಕದಾಸರು,ಸಿದ್ದರಾಮೇಶ್ವರರ ಜಯಂತಿಯನ್ನು ಆಚರಿಸುತ್ತಾರೆ ಎಂದು ದೂರಿದರು.

ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟರಅಭಿವೃದ್ಧಿಗಾಗಿ ₹29,843 ಕೋಟಿ ಪ್ರಕಟಿಸಲಾಗಿದೆ. ಆದರೆ ಇದರಲ್ಲಿ ₹13,702 ಕೋಟಿ ಬಿಡುಗಡೆಮಾಡಲಾಗಿದ್ದು, ₹4,300 ಕೋಟಿ ಮಾತ್ರ ಖರ್ಚಾಗಿದೆ. ಪರಿಶಿಷ್ಟರ ಅಭಿವೃದ್ಧಿಯನ್ನು ದಮನ ಮಾಡಬೇಕು ಎನ್ನುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇದೆ ಎಂದು ಆರೋಪಿಸಿದರು.

ಎಸ್‌ಇಪಿ ಮತ್ತು ಟಿಎಸ್‌ಪಿ ಹಣ ಖರ್ಚು ಮಾಡದಿದ್ದರೆ ಅಂತಹ ಅಧಿಕಾರಿಗಳವಿರುದ್ಧ ಕ್ರಮಕೈಗೊಳ್ಳಬೇಕು. ಆದರೆ ಇಲ್ಲಿಯವರೆಗೂ ಯಾವ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಂಡಿಲ್ಲ.ಪರಿಶಿಷ್ಟರಿಗೆ ಪಶುಭಾಗ್ಯ ಯೋಜನೆಯಡಿ
ಒಂದು ಸೀಮೆಹಸು ಸಹ ಕೊಡಲುಸಾಧ್ಯವಾಗಿಲ್ಲ. ಪರಿಶಿಷ್ಟರ ಪರ ಇದ್ದೇವೆ, ಮೀಸಲಾತಿ ನೀಡಿದ್ದೇವೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಬುದ್ಧಿವಂತಿಕೆಯಿಂದ ಪರಿಶಿಷ್ಟರನ್ನುವಂಚಿಸಲಾಗುತ್ತಿದೆ ಎಂದುಅಸಮಾಧಾನ ವ್ಯಕ್ತಪಡಿಸಿದರು.

ಹಳ್ಳಿಗಾಡಿನ ಕೂಲಿಕಾರ್ಮಿಕರ ಮಕ್ಕಳು ಮತ್ತು ಬಡವರ ಮಕ್ಕಳಿಗೆ ಅನುಕೂಲವಾಗಲಿ ಎಂದು ಹೋಬಳಿಗೊಂದು ವಸತಿ ಶಾಲೆಗಳು ಪ್ರಾರಂಭವಾಗಿವೆ. ಆದರೆ ಈ ಮಕ್ಕಳ ಆ‌ಯ್ಕೆಯಲ್ಲಿಯೂ ಅರ್ಹರಿಗೆ ವಂಚನೆ ಆಗುತ್ತಿದೆ. ಉಳ್ಳವರ ಮಕ್ಕಳು ಶಾಲೆಗಳಿಗೆ ಆಯ್ಕೆ ಆಗುತ್ತಿದ್ದಾರೆ ಎಂದು ದೂರಿದರು.

ಮುನಿರಾಜು, ಪ್ರಕಾಶ್, ಎ.ಸಿ.ನರಸಿಂಹಯ್ಯ, ತ್ಯಾಗರಾಜ್,ಮುನಿನಾರಾಯಣಪ್ಪ, ಮುನಿಕದರಪ್ಪ, ಗಂಗಾಧರಪ್ಪ, ಮುನಿಕೃಷ್ಣಪ್ಪ, ಎಲ್.ಚಂದ್ರು , ಕೇಶವ ಜಾತವಾರ, ರಾಜು, ಮಧು ಇತರರು ಗೋಷ್ಠಿಯಲ್ಲಿ ಇದ್ದರು.

‘ಪರಿಶಿಷ್ಟರು ಬುದ್ಧಿವಂತರಾಗಿ’

‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ65ರಿಂದ 70 ಸಾವಿರ ಪರಿಶಿಷ್ಟ ಸಮುದಾಯದ ಮತಗಳು ಇವೆ. ಪರಿಶಿಷ್ಟರು ಬುದ್ಧಿವಂತರಾಗಲಿಲ್ಲ ಎಂದರೆ ನಿಮ್ಮ‌ ಮಕ್ಕಳ ಪರಿಸ್ಥಿತಿ ಯಾವ ರೀತಿ ಆಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು. ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ದಲಿತರನ್ನು ವಂಚಿಸಲಾಗುತ್ತಿದೆ. ಈ ಸತ್ಯಾಂಶ ಹೊರ ಬರಲಿಲ್ಲ ಎಂದರೆ ಕಷ್ಟವಾಗಲಿದೆ’ ಎಂದು ಕೆ.ಸಿ. ರಾಜಾಕಾಂತ್ ತಿಳಿಸಿದರು.

ಸ್ವಾಭಿಮಾನಿಗಳು, ಅಂಬೇಡ್ಕರ್ ತತ್ವ ಸಿದ್ದಾಂತ ಒಪ್ಪುವವರು ಕೋಮುವಾದಿಗಳಿಗೆ ಮತ ನೀಡುವುದಿಲ್ಲ. ನಮ್ಮ‌ ಮೀಸಲಾತಿ ಕೀಳುವವರು ಮತ್ತು ನಮ್ಮ ಹಣ ಕಿತ್ತುಕೊಳ್ಳುವವರಿಗೆ ಮತ ಹಾಕಿದರೆ ಅಂತಹ ದ್ರೋಹ ಮತ್ತೊಂದಿಲ್ಲ ಎಂದರು.

ಎಸಿ ಕಚೇರಿ ಎದುರು ಧರಣಿ

ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಆಗ್ರಹಿಸಿ ಶೀಘ್ರದಲ್ಲಿಯೇ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ದಸಂಸ ತಾಲ್ಲೂಕು ಸಂಚಾಲಕಎನ್.ಪರಮೇಶ್ ತಿಳಿಸಿದರು.

ಚಿಕ್ಕಬಳ್ಳಾಪುರ ಶಾಸಕರಾದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಆರೋಗ್ಯ ಇಲಾಖೆಯನ್ನು ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆ ಹಣ ‍ಪಡೆಯುತ್ತಿದ್ದಾರೆ. ಶವವನ್ನು ಸಾಗಿಸಲು ವಾಹನದ ವ್ಯವಸ್ಥೆಯೂ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT