ಸೋಮವಾರ, ಮೇ 17, 2021
21 °C

ಚಿಂತಾಮಣಿ: ಮದ್ಯ ಕುಡಿಯಲು ಕರೆದೊಯ್ದು ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಮದ್ಯಪಾನ ಮಾಡಲು ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಾಲ್ಲೂಕಿನ ಕೊತ್ತಪಲ್ಲಿ ಗ್ರಾಮದ ನರಸಿಂಹ ಬಟ್ಲಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಬಂಡೆ ಕೆಲಸ ಮಾಡಿಕೊಂಡು ಜೀವನ ನಡೆಸುವ ನರಸಿಂಹ ಮತ್ತು ಕಾನಗಮಾಕಲಹಳ್ಳಿ ಗ್ರಾಮದ ರವಿ ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದರು. ವಾರಕ್ಕೆ ಒಮ್ಮೆ ಇಬ್ಬರೂ ಜತೆಯಲ್ಲಿ ಹೋಗಿ ಮದ್ಯಪಾನ ಮಾಡುತ್ತಿದ್ದರು. ಸೋಮವಾರ ನರಸಿಂಹ ಕಾನಗಮಾಕಲ
ಹಳ್ಳಿ ಗ್ರಾಮಕ್ಕೆ ಹೋಗಿದ್ದಾಗ ರವಿ ಮದ್ಯ ಕೊಡಿಸು ಎಂದು ದಂಬಾಲು ಬಿದ್ದನು. ಇಬ್ಬರೂ ದ್ವಿಚಕ್ರವಾಹನದಲ್ಲಿ ಮುರುಗಮಲ್ಲ ಗ್ರಾಮಕ್ಕೆ ಬಾರ್‌ನಲ್ಲಿ ಮದ್ಯ ಕುಡಿದಿದ್ದೆವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಮುರುಗಮಲ್ಲ ಗ್ರಾಮದಿಂದ ಹೊರಟು ಗುಂಡ್ಲಹಳ್ಳಿ ಗ್ರಾಮದ ಗೇಟ್ ಬಳಿ ವಾಹನವನ್ನು ನಿಲ್ಲಿಸಿ, ಬಂಡೆಯ ಮೇಲೆ ಕುಳಿತಿರುವಾಗ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಒದ್ದು ಕೆಳಗೆ ದಬ್ಬಿ, ಕಲ್ಲಿನಿಂದ ಮುಖದ ಮೇಲೆ ಜಜ್ಜಿದ್ದಾನೆ. ಅದೇ ಸಮಯಕ್ಕೆ ದ್ವಿಚಕ್ರವಾಹನದಲ್ಲಿ ಬಂದ ರವಿ ಇಬ್ಬರೂ ಸ್ನೇಹಿತರು ಸೇರಿಕೊಂಡು ಕೈ,ಕಾಲುಗಳನ್ನು ಹಿಡಿದು ಎತ್ತಿ ಬಿಸಾಡಿದರು. ಬೆನ್ನಿಗೆ ಮತ್ತು ಭುಜಕ್ಕೆ ಬಲವಾದ ಗಾಯಗಳಾಗಿವೆ’ ಎಂದು ದೂರಿದ್ದಾರೆ.

‘ಮುರುಗಮಲ್ಲ ರಸ್ತೆಯಲ್ಲಿ ಬರುತ್ತಿದ್ದ ನಮ್ಮ ಚಿಕ್ಕಪ್ಪ ನಾಗೇಶ್ ಮತ್ತು ಅವರ ಮಗ ಅರುಣ್ ಕುಮಾರ್ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಬಂದು ಗಾಡಿ ನಿಲ್ಲಿಸುತ್ತಿದ್ದಂತೆ ರವಿ ಮತ್ತು ಸ್ನೇಹಿತರು ಪರಾರಿಯಾದರು. ನಾಗೇಶ್ ಅವರು ಆಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಮೂರು ಜನ ಆರೋಪಿಗಳ ಮೇಲೆ ಕ್ರಮಕೈಗೊಂಡು ನನಗೆ ನ್ಯಾಯ ಒದಗಿಸಬೇಕು’ ಎಂದು ನರಸಿಂಹ ದೂರಿನಲ್ಲಿ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು