ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ‘ಟಾಪ್‌’ ಪ್ರಯಾಣ

Last Updated 19 ಜನವರಿ 2021, 2:00 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಪಾತಪಾಳ್ಯ, ಸೋಮನಾಥಪುರ, ಬಿಳ್ಳೂರು, ಗೂಳೂರು ಸೇರಿದಂತೆ ಚಿಂತಾಮಣಿ ಮಾರ್ಗದ ಕಡೆಗೆ ಸಂಚರಿಸುವ ಗ್ರಾಮೀಣ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌‌ಗಳ ಕೊರತೆಯಿಂದಾಗಿ ಖಾಸಗಿ ಬಸ್‌ಗಳ ಮೇಲೆ ಕುಳಿತು ಜನರು, ವಿದ್ಯಾರ್ಥಿಗಳು ಅಸುರಕ್ಷಿತ ಪ್ರಯಾಣ ಮಾಡುವಂತಾಗಿದೆ.

ಪಟ್ಟಣಕ್ಕೆ ಆಂಧ್ರಪ್ರದೇಶ ಕೇವಲ 3 ಕಿ.ಮೀ ದೂರದಲ್ಲಿದೆ. ಆಂಧ್ರಪ್ರದೇಶದ ಗೋರಂಟ್ಲ, ಹಿಂದೂಪುರ, ಪುಟ್ಟಪರ್ತಿ, ‌ಅನಂತಪುರ ಕಡೆಗೆ ಹಾಗೂ ಚಿಕ್ಕಬಳ್ಳಾಪುರ ಮಾರ್ಗದ ಮೂಲಕ ಬೆಂಗಳೂರಿಗೆ ರಸ್ತೆ ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಆದರೆ, ಪಟ್ಟಣದಿಂದ ಮಿಟ್ಟೇಮರಿ ಮಾರ್ಗದ ಮೂಲಕ ಚಿಂತಾಮಣಿ, ಪಾತಪಾಳ್ಯ ಮೂಲಕ ಬಿಳ್ಳೂರು, ಚಾಕವೇಲು, ಸೋಮನಾಥಪುರ ಚೇಳೂರು ಹಾಗೂ ಗೂಳೂರು ಮಾರ್ಗದ ಮೂಲಕ ಮಾರ್ಗಾನುಕುಂಟೆ, ಗೊರ್ತಪಲ್ಲಿ ಕಡೆಗೆ ಬೆಳಿಗ್ಗೆ-ಸಂಜೆ ಮಾತ್ರ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸುತ್ತವೆ. ತೀವ್ರ ತೊಂದರೆಯಾಗಿದೆ.

ಶಾಲಾ, ಕಾಲೇಜು ಆರಂಭಿಸಲಾಗಿದೆ. 6ರಿಂದ 9ರವರೆಗೂ ವಿದ್ಯಾಗಮ ನಡೆಯುತ್ತಿದೆ. ಶಾಲಾ, ಕಾಲೇಜುಗಳಿಗೆ ಹೋಗಿಬರಲು ಬಸ್ ಸೌಲಭ್ಯ ಇಲ್ಲ. ಸಾರಿಗೆ ಬಸ್‌ಗಳ ಬರುವಿಕೆಗೆ ಗ್ರಾಮಗಳ ಕ್ರಾಸ್‌ಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT