ಭಾನುವಾರ, ಸೆಪ್ಟೆಂಬರ್ 25, 2022
21 °C

ಬಾಗೇಪಲ್ಲಿ: ಇಬ್ಬರು ಬೈಕ್ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ರಾಷ್ಟ್ರೀಯ ರಸ್ತೆ ಹೆದ್ದಾರಿ-7ರ ಟೋಲ್ ಫ್ಲಾಜಾದಲ್ಲಿ ಪೊಲೀಸರು ಕಾರ್ಯಾಚರಣೆ ನಡಸಿ ಇಬ್ಬರು ದ್ವಿಚಕ್ರ ವಾಹನಗಳ ಕಳ್ಳರನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿ ಪವನ್(24), ಆಂಧ್ರಪ್ರದೇಶದ ನಂಗನೂರುಪಲ್ಲೆ ಗ್ರಾಮದ ನಿವಾಸಿ ಸತೀಶ್(20) ಬಂಧಿತರು.

ರಾಷ್ಟ್ರೀಯ ರಸ್ತೆ ಹೆದ್ದಾರಿಯಲ್ಲಿ ಪೊಲೀಸರು ದ್ವಿಚಕ್ರ ವಾಹನ ತಪಾಸಣೆ ನಡೆಸುತ್ತಿದ್ದರು. ಬಾಗೇಪಲ್ಲಿ ಕಡೆಯಿಂದ ಆನಂತಪುರ ಕಡೆಗೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು. ಇವರಿಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ ವಿಚಾರ ತಿಳಿದು ಬಂದಿದೆ.

ಇವರಿಬ್ಬರು ಬೆಂಗಳೂರಿನ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿ, ಆಂಧ್ರಪ್ರದೇಶದ ಗೋರಂಟ್ಲ, ಕಡಪ, ಪೊದ್ದಟೂರುಗಳಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ  ಒಂದು ಪಲ್ಸರ್, 2 ಕೆಟಿಎಂ ಡ್ಯೂಕ್ ಬೈಕ್‌, ಒಂದು ದ್ವಿಚಕ್ರ ವಾಹನ ಸೇರಿ, 16 ದ್ವಿಚಕ್ರ ವಾಹನ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎನ್.ನಾಗೇಶ್, ಉಪ ಪೊಲೀಸ್ ವರಿಷ್ಠಾಧಿಕಾರಿ ವಿ.ಕೆ.ವಾಸುದೇವ್ ಮಾರ್ಗದರ್ಶನದಲ್ಲಿ, ಸರ್ಕಲ್ ಇನ್‌ಸ್ಪೆಕ್ಟರ್‌ ಡಿ.ಆರ್.ನಾಗರಾಜ್ ನೇತೃತ್ವದಲ್ಲಿ, ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್‌ ಪಾಪಣ್ಣ, ಅಪರಾಧ ಪತ್ತೆ ದಳದ ಸಿಬ್ಬಂದಿ  ಎಸ್ಎಸ್ಐ ಶ್ರೀನಿವಾಸ್, ಮೋಹನ್ ಕುಮಾರ್, ಅರುಣ್, ಧನಂಜಯ್, ಅಶೋಕ್, ಸಾಗರ್, ವಿನಾಯಕ ವಿಶ್ವಬ್ರಾಹ್ಮಣ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು