ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ಮರುದಿನವಾದ ಶುಕ್ರವಾರ ಜಿಲ್ಲೆಯಾದ್ಯಂತ ಜನರು ಸಂಭ್ರಮದಿಂದ ವರ್ಷ ತೊಡಕು ಆಚರಿಸಿದರು.

ಯುಗಾದಿ ಹಬ್ಬದ ಮರು ದಿನ ವರ್ಷ ತೊಡಕು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾದ್ದರಿಂದ ಜನರು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಗುರುವಾರ ಹಬ್ಬದ ಊಟವಾಗಿ ಒಬ್ಬಟ್ಟು ಸವಿದವರು ಶುಕ್ರವಾರ ಕುರಿ, ಕೋಳಿಯ ಮಾಂಸದ ಅಡುಗೆ ಮಾಡಿ ವರ್ಷದ ತೊಡಕು ಆಚರಿಸಿದರು. ಊಟಕ್ಕೆ ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಕರೆದು ಆತಿಥ್ಯ ನೀಡಿದರು.

ನಗರದಾದ್ಯಂತ ಬಹುತೇಕ ಎಲ್ಲ ರಸ್ತೆಗಳು ಜನ ಮತ್ತು ವಾಹನಗಲಿಲ್ಲದೆ ಭಣಗುಡುತ್ತಿದ್ದವು. ಹೋಟೆಲ್ಗಳು, ಅಂಗಡಿಗಳು ಮುಚ್ಚಿದ್ದವು. ಬೆಳಿಗ್ಗೆಯೇ ಮಾಂಸದ ಅಂಗಡಿಗಳಲ್ಲಿ ಜನರು, ಮೀನು, ಕುರಿ, ಮೇಕೆ ಮತ್ತು ಕೋಳಿ ಮಾಂಸ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಒಂದು ಕೆ.ಜಿ ಮಟನ್ ದರ ₹ 850ರಿಂದ ₹ 900 ಇತ್ತು. ಚಿಕನ್ ದರ ಕೆ.ಜಿಗೆ ₹ 300 ಇತ್ತು.

ಯುಗಾದಿ ಸಂಭ್ರಮ: ಗುರುವಾರ ಯುಗಾದಿ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿದ ಜನರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಅಭ್ಯಂಜನದ ಬಳಿಕ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ, ಬೇವು -ಬೆಲ್ಲ ತಿಂದು, ಶುಭಾಶಯ ವಿನಿಮಯ ಮಾಡಿಕೊಂಡರು.

ಮಧ್ಯಾಹ್ನ ಹೋಳಿಗೆ, ಪಾಯಸ ಸವಿದು ಸಂಭ್ರಮಿಸಿದರು. ಸಂಜೆ ದೇವಾಲಯಗಳಿಗೆ ಹೋಗಿ ಪಂಚಾಂಗ ಶ್ರವಣ ಮಾಡಿದ ಭಕ್ತರು, ವಿಶೇಷ ಪೂಜೆ ಸಲ್ಲಿಸಿದರು. ಯುಗಾದಿ ಹಬ್ಬದ ಅಂಗವಾಗಿ ರೈತರು ತಮ್ಮ ದನಕರುಗಳನ್ನು ತೊಳೆದು, ವಿಶೇಷ ಪೂಜೆ ಸಲ್ಲಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಬಾಡೂಟ

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ಕೈಗಾರಿಕೆಗಳಿಗೆ ಭೂ ಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ರೈತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಯುಗಾದಿ ಹಬ್ಬದ ದಿನ ಸ್ಥಳದಲ್ಲಿಯೇ ಹೋಳಿಗೆಯನ್ನು ತಯಾರಿಸಿ ಹಬ್ಬ ಆಚರಿಸಲಾಯಿತು. ವರ್ಷ ತೊಡಕಿನ ದಿನ ಪ್ರತಿಭಟನಾನಿರತ ರೈತರು ಬಾಡೂಟ ತಯಾರಿಸಿದರು. ಸಂಭ್ರಮದಿಂದ ವರ್ಷ ತೊಡಕು ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.