ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸುಗಳಿಗೆ ಲಸಿಕಾ ಕಾರ್ಯಕ್ರಮ

Last Updated 10 ಫೆಬ್ರುವರಿ 2021, 4:30 IST
ಅಕ್ಷರ ಗಾತ್ರ

ಬಾಗೇಪಲ್ಲಿ: ರೈತರು ರಾಸು, ಕುರಿ ಮೇಕೆಗಳಿಗೆ ಕಾಲಕಾಲಕ್ಕೆ ತಕ್ಕಂತೆ ಲಸಿಕೆ ಕೊಡಿಸಬೇಕು ಹಾಗೂ ಜಂತುಹುಳು ಮಾತ್ರೆಗಳನ್ನು ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎನ್.ಇ.ಕೃಷ್ಣಮೂರ್ತಿ ರೈತರಿಗೆ ಕರೆ ನೀಡಿದರು.

ತಾಲ್ಲೂಕಿನ ಊಟಗುಂದಿತಾಂಡದಲ್ಲಿ ಪಶುವೈದ್ಯ ಇಲಾಖೆ ಹಾಗು ಸಪ್ತಗಿರಿ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಸು, ಕುರಿ ಮೇಕೆಗಳಿಗೆ ಉಚಿತವಾಗಿ ಲಸಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಹೆಚ್ಚಾಗಿ ಜೌಗು ಪ್ರದೇಶಗಳು ಇದೆ. ಬಹುತೇಕವಾಗಿ ಹಸು, ಕುರಿ ಮೇಕೆ ಸೇರಿದಂತೆ ರಾಸುಗಳನ್ನು ಬೆಟ್ಟ-ಗುಡ್ಡಗಳಲ್ಲಿ ಮೇಯಿಸುತ್ತಾರೆ. ಸೇವಿಸುವ ಆಹಾರದಲ್ಲಿ ಕೆಲ ಕ್ರಿಮಿಕೀಟಗಳು ಪ್ರಾಣಿಗಳ ಹೊಟ್ಟೆಗೆ ಸೇರುತ್ತದೆ. ಕೆಲ ಪ್ರಾಣಿಗಳಲ್ಲಿ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯುವುದಿಲ್ಲ. ಇದರಿಂದ ವಿವಿಧ ರೋಗಗಳು ಹರಡುತ್ತದೆ. ರೈತರು ಸದಾ ತಮ್ಮ ರಾಸು, ಕುರಿ, ಮೇಕೆಗಳ ಆರೋಗ್ಯ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.

ಬಹುತೇಕವಾಗಿ ರೈತರು ಹೆಚ್ಚಾಗಿ ಕುರಿ ಹಾಗೂ ಮೇಕೆಗಳನ್ನು ಸಾಕುತ್ತಿದ್ದಾರೆ. ಕೆಲ ರೈತರು ಸಾಕುಪ್ರಾಣಿಗಳನ್ನು ಕಾಲಕಾಲಕ್ಕೆ ಮಾರಾಟ ಮಾಡಿ ಜೀವನ ಸಾಗಿಸುವಂತೆ ಆಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಬಳಸುತ್ತಾರೆ. ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಹಾಗೂ ಮುಖ್ಯವಾಗಿ ವಿಮೆಯನ್ನು ಮಾಡಿಸಬೇಕು. ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು. ರಾಸುಗಳಿಗೆ ಗುಣಮಟ್ಟದ ಹುಲ್ಲನ್ನು ಹಾಕಬೇಕು. ಇದರಿಂದ ಹಾಲಿನ ಗುಣಮಟ್ಟವು ಹೆಚ್ಚಾಗುತ್ತದೆ. ಪ್ರತಿ 15 ದಿನಕ್ಕೊಮ್ಮೆ ಹಾಲಿನ್ ಬಿಲ್ ಪಡೆದು, ಕುಟುಂಬಗಳ ಪೋಷಣೆಗೆ ಬಳಸಬಹುದು ಎಂದು ಕರೆ ನೀಡಿದರು.

ಶಿವಸಪ್ತಗಿರಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎ.ಎನ್.ನಾಗರಾಜ್ ಮಾತನಾಡಿ, ಅತ್ಯಂತ ಹಿಂದುಳಿದ ಪ್ರದೇಶವಾದ ಊಟಗೊಂದಿತಾಂಡದಿಂದ ರಾಸು, ಕುರಿ ಹಾಗೂ ಮೇಕೆಗಳನ್ನು ಕರೆದುಕೊಂಡು ಬಂದು ಲಸಿಕೆಗಳನ್ನು ಹಾಕಿಸಲು ಆಗುವುದಿಲ್ಲ. ಇದರಿಂದ ಪಶುವೈದ್ಯರ ತಂಡವನ್ನೇ ಕರೆಯಿಸಿ, ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸಲಾಗಿದೆ. ಮುಂದಿನ ದಿನಗಳಲ್ಲಿ ಬಡವರ ಕಲ್ಯಾಣ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಿಬಿರದಲ್ಲಿ ಊಟಗೊಂದಿತಾಂಡದ 450 ರಾಸು, ಕುರಿ, ಮೇಕೆಗಳಿಗೆ ಪಶು ವೈದ್ಯರು ಲಸಿಕೆಗಳನ್ನು ಉಚಿತವಾಗಿ ಹಾಕಿದರು. ಜಂತುಹುಳುಗಳ ಔಷಧಗಳನ್ನು ರೈತರಿಗೆ ವಿತರಿಸಲಾಯಿತು. ಔಷಧಿಗಳ ಬಳಕೆ, ರಾಸುಗಳ ಆರೋಗ್ಯದ ಬಗ್ಗೆ ವೈದ್ಯರು ರೈತರಿಗೆ ಅರಿವು ಮೂಡಿಸಿದರು.

ದಿನಸಿ ವಿತರಣೆ: ತಾಲ್ಲೂಕಿನ ಗೂಳೂರು ನಿಡುಮಾಮಿಡಿ ಮಠದ ರತು ವೃದ್ಧಾಶ್ರಮದಲ್ಲಿ ವೃದ್ಧರಿಗೆ ಪಟ್ಟಣದ ಶಿವಸಪ್ತಗಿರಿ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ದಿನಸಿ ಪದಾರ್ಥಗಳು, ಸೊಳ್ಳೆ ಪರದೆ, ಹಣ್ಣು ಹಾಗೂ ಬಲ್ಬ್‌ ಹಾಗೂ ಮಾಸ್ಕ್‌ಗಳನ್ನು ವಿತರಿಸಲಾಯಿತು.

ಪಶುವೈದ್ಯ ಇಲಾಖೆಯ ಡಾ.ಸಾಯಿಪ್ರಕಾಶ್, ಡಾ.ಸತೀಶ್, ಡಾ.ಶ್ರೀಕಂಠ, ಡಾ.ಚೌಡರೆಡ್ಡಿ, ಶಿವಸಪ್ತಗಿರಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೆ.ಆರ್.ರಾಮಚಂದ್ರನಾಯ್ಡು, ಕಾರ್ಯದರ್ಶಿ ಎಸ್.ವೆಂಕಟರವಣಪ್ಪ, ಉಪಾಧ್ಯಕ್ಷರಾದ ಎ.ಎನ್.ನಾಗರಾಜ್, ನೌಷಾದ್, ಖಜಾಂಚಿ ಹಾಗು ನಿವೃತ್ತ ಉಪತಹಶೀಲ್ದಾರ್ ಗಳಾದ ನಾಗೇಂದ್ರಪ್ಪ, ಕಾರಕೂರಪ್ಪ, ಬಂಜಾರ ಮುಖಂಡ ಹನುಮೇನಾಯಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT