ಶಿಡ್ಲಘಟ್ಟ: ನಗರದ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಪುರಂದರದಾಸ, ತ್ಯಾಗರಾಜಸ್ವಾಮಿ, ಕನಕದಾಸ, ಶ್ರೀಯೋಗಿ ನಾರೇಯಣ ಯತೀಂದ್ರರು ಸೇರಿದಂತೆ ವಾಗ್ಗೇಯಕಾರರ ಆರಾಧನಾ ಮಹೋತ್ಸವ ನಡೆಯಿತು.

ಕೈವಾರ ಯತೀಂದ್ರರ ಮಠ, ಮಾರುತಿ ಸಂಗೀತ ಅಕಾಡೆಮಿ ಮತ್ತು ಕಾಳಿಕಾಂಬ ಕಮಠೇಶ್ವರ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಳಿಕಾಂಬ ಕಮಠೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪಂಚಾಮೃತಾಭಿಷೇಕ, ವಜ್ರಾಂಗಿ ಅಲಂಕಾರ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.

ಬಳಿಕ ನಾದಸ್ವರ ವಿದ್ವಾನ್ ದೊಡ್ಡದಾಸೇನಹಳ್ಳಿ ಮುನಿನಾರಾಯಣಪ್ಪ ಅವರಿಂದ ನಾದಸ್ವರ ಕಛೇರಿ ನಡೆಯಿತು. ಮಂಜುಳ ಜಗದೀಶ್, ಶಾಂತ ಕೃಷ್ಣಮೂರ್ತಿ, ಸವಿತ ಸುಬ್ರಮಣ್ಯಂ, ಹೇಮಾ ಬಾಲಾಜಿ, ಉಷಾ ನಾರಾಯಣಮೂರ್ತಿ, ಸೌಭಾಗ್ಯಲಕ್ಷ್ಮಿ, ಸ್ಪಂದನ ಸೇರಿದಂತೆ ಹಲವು ವಿದ್ವಾನ್, ವಿದುಷಿಯರು ಸಂಗೀತ ಕಛೇರಿ ನಡೆಸಿಕೊಟ್ಟರು.

ಆರ್.ಜಗದೀಶ್ ಕುಮಾರ್, ಜಿ.ಎಸ್.ಶಾಮಸುಂದರ್, ಗಾಯಿತ್ರಿ, ವಿಜಯ್ ಕುಮಾರ್, ನವೀನ್ ಕುಮಾರ್ ಮೊದಲಾದವರು ಪಿಟೀಲು ನುಡಿಸಿದರೆ, ವಿ.ಪಿ.ರಘುನಾಥ್ರಾವ್, ರವಿತೇಜ, ಲಕ್ಷ್ಮಿನಾರಾಯಣ್, ಮೋಹನ್ ಕುಮಾರ್, ವಿನಯ್ ಕುಮಾರ್, ರುದ್ರಾಚಾರಿ, ಕಾರ್ತಿಕ್ ಅವರ ತಂಡ ಮೃದಂಗ ನುಡಿಸಿತು.

ಮಂಜುಳ ಜಗದೀಶ್ ನೇತೃತ್ವದಲ್ಲಿ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ ನಡೆದರೆ, ಡಾ.ಎಂ.ವಿ.ಶ್ರೀನಿವಾಸಮೂರ್ತಿ ಸಂಗೀತ ಕಛೇರಿ ನಡೆಸಿಕೊಟ್ಟರು. ಸಂಜೆ ವಿದ್ವಾನ್ ವಿಶ್ವನಾಥ್ ಅವರಿಂದ ಸೋಲೋ ವಾದನ ಮತ್ತು ಆಹ್ವಾನಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.