ಗೌರಿಬಿದನೂರು: ದಕ್ಷಿಣದ ಜಲಿಯನ್ ವಾಲಾಬಾಗ್ ಆಗಿರುವ ವಿದುರಾಶ್ವತ್ಥಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಶನಿವಾರ ಭೇಟಿ ನೀಡಿದರು.

ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ನಂತರ ಹುತಾತ್ಮರ ಸ್ತೂಫಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಗ್ಯಾಲರಿಗೆ ತೆರಳಿ ವಿದುರಾಶ್ವತ್ಥದ ಇತಿಹಾಸ, ದಕ್ಷಿಣ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸೇರಿದಂತೆ ಇನ್ನಿತರ ಮಾಹಿತಿಯನ್ನು ಡಾ.ಎಚ್.ಎನ್ ಪ್ರಾಧಿಕಾರ ಅಧ್ಯಕ್ಷ ಶಿವಶಂಕರ ರೆಡ್ಡಿ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, 1938ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಪ್ರಹಾರದ ವಿರುದ್ಧ ನಿಂತು ತ್ಯಾಗ ಬಲಿದಾನಕ್ಕೆ ಹೆಸರಾದ ಸ್ಥಳವಿದು. ಮುಂದಿನ ದಿನಗಳಲ್ಲಿ ಈ ಘಟನೆಗೆ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಹುತಾತ್ಮರ ಅಪೇಕ್ಷೆಯಂತೆ ಮುಂದಿನ ಪೀಳಿಗೆ ಸ್ವಾತಂತ್ರ್ಯ, ಸಮಾನತೆ, ತಾರತಮ್ಯ ರಹಿತ, ಉತ್ತಮ ವಿದ್ಯೆ, ಉತ್ತಮ ಅವಕಾಶಗಳು ಸಂವಿಧಾನದ ಅಡಿ ಸಿಗುವಂತಾಗಬೇಕು. ಇದಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಡಾ.ಎಚ್.ಎನ್. ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, 1938ರ ಏಪ್ರಿಲ್ 25ರಂದು ಭಾರತದ ಸುವರ್ಣ ಅಕ್ಷರಗಳಲ್ಲಿ ದಾಖಲಾದ ದಿನವಾಗಿದೆ. ಸ್ವಾತಂತ್ರ್ಯಕ್ಕಾಗಿ ವಿದುರಾಶ್ವತ್ಥದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿ, ಧ್ವಜ ಹಾರಿಸುವುದನ್ನು ತಡೆಯಲು ಬ್ರಿಟಿಷ್ ಸರ್ಕಾರವು 90 ಸುತ್ತು ಗುಂಡುಗಳನ್ನು ಹಾರಿಸಿತ್ತು. ಈ ಘಟನೆಯಲ್ಲಿ 11 ಮಂದಿ ಹುತಾತ್ಮರಾದರು ಎಂಬುದಾಗಿ ದಾಖಲಾಗಿದೆ. ಇದಲ್ಲದೆ, ಗರ್ಭಿಣಿ ಸೇರಿ 32ಕ್ಕೂ ಹೆಚ್ಚು ಮಂದಿ ಸ್ವಾತಂತ್ರ್ಯ ಹೋರಾಟಗಾರರೂ ಪ್ರಾಣ ತ್ಯಾಗ ಮಾಡಿದ್ದರು ಎಂಬುದಾಗಿ ದಾಖಲೆಗಳಿವೆ ಎಂದರು.

ಮುಂದಿನ ದಿನಗಳಲ್ಲಿ ಲೇಸರ್ ಶೋ, ಆಡಿಯೊ ವಿಶುಯಲ್ ಗ್ಯಾಲರಿ, ಗಾಂಧೀಜಿಯವರ ಗ್ಯಾಲರಿ ಪ್ರಾರಂಭಿಸಿ, ಮುಂದಿನ ಪೀಳಿಗೆಗೆ ವಿದುರಾಶ್ವತ್ಥದ ಮಹತ್ವ ತಿಳಿಸುವ ಕೆಲಸ ಮಾಡಲಾಗುವುದು ಎಂದರು.

ಈ ವೇಳೆ ತಹಶೀಲ್ದಾರ್ ಅರವಿಂದ್ ಕೆ.ಎಂ, ವಿದುರಾಶ್ವತ್ಥ ಕಾರ್ಯನಿರ್ವಾಹಕ ಅಧಿಕಾರಿ ಮರಿರಾಜು, ರಾಜಸ್ವ ನಿರೀಕ್ಷಕ ಖಾದರ್, ಪೇಶ್ಕಾರ್ ಕೃಷ್ಣಮೂರ್ತಿ, ಸುದರ್ಶನ್, ಮುತ್ತುರಾಜ್, ಕಲಾವಿದ ರಾಮಕೃಷ್ಣ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಇನ್ನಿತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-16-494426926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.