ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಮೂರು ದಿನ ಕಳೆದರೂ ಇಳಿಯದ ತಿರಂಗಾ, ರಾಷ್ಟ್ರಧ್ವಜ ಶಿಷ್ಟಾಚಾರ ಉಲ್ಲಂಘನೆ

Last Updated 17 ಆಗಸ್ಟ್ 2022, 4:37 IST
ಅಕ್ಷರ ಗಾತ್ರ

ಚಿಂತಾಮಣಿ: ಪ್ರಧಾನಿ ನರೇಂದ್ರ ಮೋದಿ ಅವರ ಹರ್‌ ಘರ್ ತಿರಂಗಾ ಕರೆಗೆ ಓಗೊಟ್ಟು ಮೂರು ದಿನ ಎಲ್ಲೆಡೆ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಜನರು ತೋರಿಸಿದ ಉತ್ಸಾಹ ಅದೇ ಧ್ವಜವನ್ನು ಇಳಿಸುವಾಗ ಮಾಯವಾಗಿದೆ.

ಅಮೃತ ಮಹೋತ್ಸವದ ಧ್ವಜಗಳನ್ನು ಶಾಲೆ, ಸರ್ಕಾರಿ ಕಚೇರಿ, ಮನೆಗಳ ಮೇಲೆ ಉತ್ಸಾಹದಿಂದ ಹಾರಿಸಲಾಯಿತು. ಸ್ಥಳೀಯ ಸಂಸ್ಥೆಗಳು, ರಾಜಕೀಯ ಪಕ್ಷಗಳು ಸಂಘ, ಸಂಸ್ಥೆಗಳು ಪೈಪೋಟಿ ಮೇಲೆ ರಾಷ್ಟ್ರಧ್ವಜ ವಿತರಿಸಿದವು. ಆದರೆ, ಧ್ವಜ
ಹಾರಿಸಲು ತೋರಿದ ಉತ್ಸಾಹ ಮತ್ತು ಅಭಿಮಾನ ಧ್ವಜ ಇಳಿಸುವಾಗ ಕಾಣೆಯಾಗಿದೆ. ಬಹುತೇಕ ಕಡೆಗಳಲ್ಲಿ ಧ್ವಜ ಇಳಿಸುವಾಗ ಶಿಷ್ಟಾಚಾರ, ನಿಯಮ ಪಾಲಿಸುತ್ತಿಲ್ಲ. ರಾಷ್ಟ್ರಧ್ವಜವನ್ನು ಗೌರವಯುತವಾಗಿ ಇಳಿಸುವ ಶಿಷ್ಟಾಚಾರವನ್ನು ಜನರು
ಮರೆತಿದ್ದಾರೆ.

ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಆಗಸ್ಟ್‌ 13 ರಿಂದ 15 ರವರೆಗೂ ಪ್ರತಿನಿತ್ಯ ಬೆಳಿಗ್ಗೆ ಬಾವುಟ ಹಾರಿಸಿ ಸಂಜೆ ಸೂರ್ಯಾಸ್ತ ಸಮಯದಲ್ಲಿ ರಾಷ್ಟ್ರಗೀತೆಯೊಂದಿಗೆ ಧ್ವಜ ಇಳಿಸಬೇಕು. ಮನೆಗಳ ಮೇಲೆ ಹಾರಿಸಿದ ಧ್ವಜಗಳನ್ನು ಮಾತ್ರ ಆಗಸ್ಟ್‌ 13 ರಂದು ಬೆಳಿಗ್ಗೆ ಹಾರಿಸಿ 15 ರಂದು ಸಂಜೆ 6ಕ್ಕೆ ಇಳಿಸಬೇಕು ಎಂದುಸರ್ಕಾರ ಹೊರಡಿಸಿದಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಬಹುತೇಕ ಕಡೆ ಈ ನಿಯಮ ಪಾಲನೆಯಾಗಿಲ್ಲ. ಮಂಗಳವಾರ ಸಂಜೆಯಾದರೂ ಮನೆಗಳ ಮೇಲೆತಿರಂಗಾಹಾರಾಡುತ್ತಿವೆ.

ಧ್ವಜ ಸಂಹಿತೆ ಉಲ್ಲಂಘನೆ

‘ಸಾರ್ವಜನಿಕರಲ್ಲದೆ ಹಲವು ಶಾಲೆಗಳಲ್ಲಿ ಅಧ್ವಾನಗಳು ನಡೆದಿವೆ. ಕೆಲವು ಖಾಸಗಿ ಶಾಲೆಗಳಲ್ಲಿ ಧ್ವಜ ಸಂಹಿತೆಯನ್ನು ಗಾಳಿಗೆ ತೂರಲಾಗಿದೆ. ಕಾಟಾಚಾರದ ಧ್ವಜಾರೋಹಣ ನಡೆದಿವೆ. ಶಾಲೆಗಳಲ್ಲಿ ಇಂತಹ ಬೇಜವಾಬ್ದಾರಿಗೆ ಕೊನೆ ಹಾಡಬೇಕು. ಧ್ವಜಕ್ಕೆ ಅಪಮಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನಿವೃತ್ತ ಸೈನಿಕ ಶಿವಾನಂದರೆಡ್ಡಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT