ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ತ್ಯಾಜ್ಯದ ತಾಣ ಪೊಲೀಸ್ ಚೌಕಿ, ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿ ಇಲ್ಲ

Last Updated 15 ಡಿಸೆಂಬರ್ 2021, 4:50 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಗಳಲ್ಲಿ ಪೊಲೀಸ್ ಇಲಾಖೆ ನಿರ್ಮಿಸಿರುವ ಪೊಲೀಸ್ ಚೌಕಿಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸದೆ ಸಂಚಾರ ದಟ್ಟಣೆ ಹೆಚ್ಚಾಗುವ ಜೊತೆಗೆ, ಬಳಕೆ ಮಾಡದಿರುವುದರಿಂದ ಚೌಕಿಗಳು ನೆಲಕ್ಕೆ ಉರುಳುವ ಹಂತ ತಲುಪಿವೆ.

ಪಟ್ಟಣದ ಮುಖ್ಯರಸ್ತೆ ನ್ಯಾಷನಲ್ ಕಾಲೇಜಿನಿಂದ ಸಿವಿಲ್ ನ್ಯಾಯಾಲಯದವರೆಗೂ 100 ಅಡಿ ವಿಶಾಲವಾದ ಒಂದೇ ಒಂದು ಮುಖ್ಯರಸ್ತೆ ಇದೆ. ಬಾಲಕಿಯರ ಹಿರಿಯ, ಪ್ರೌಢಶಾಲೆಗಳು, ಪಿಯುಸಿ ಕಾಲೇಜುಗಳು ಇವೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಚರಿಸುತ್ತಿದ್ದಾರೆ. ಅಂಗಡಿಗಳು, ಬೀದಿಬದಿಯ ವ್ಯಾಪಾರ ವಹಿವಾಟು ಹೆಚ್ಚಾಗಿವೆ. ರಸ್ತೆಗೆ ಅಂಟಿಕೊಂಡಂತೆ ಭಜನೆ ಮಂದಿರ, ಕುಂಬಾರಪೇಟೆ, ಸಂತೇಮೈದಾನ, ಆವುಲಮಂದೆ ರಸ್ತೆಗಳು ಸೇರಿದಂತೆ ಸಾವಿರಾರು ಮಂದಿ ಜನರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಹೀಗಾಗಿ ದಟ್ಟಣೆ ಅಧಿಕ. ಇದರ ನಿಯಂತ್ರಣವಾಗುತ್ತಿಲ್ಲ ಎಂಬುದು ನಾಗರಿಕರ ದೂರಾಗಿದೆ.

‘ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಪೊಲೀಸ್ ಇಲಾಖೆಯಿಂದ ಡಾ.ಎಚ್.ಎನ್.ವೃತ್ತ, ಸರ್ಕಾರಿ ಆಸ್ಪತ್ರೆ, ಹಾಗೂ ಬಸ್ ನಿಲ್ದಾಣದ ಮುಂದೆ ಪೊಲೀಸ್ ಚೌಕಿಗಳನ್ನು ಮಾಡಿದ್ದಾರೆ. ಚೌಕಿಗಳ ಮೇಲೆ ಸಂಚಾರ ನಿಯಂತ್ರಣ, ನಿಯಮಗಳ ಜಾಹೀರಾತುಗಳನ್ನು ಬರೆದಿದ್ದಾರೆ. ಚೌಕಿಗಳಲ್ಲಿ ಪೊಲೀಸರು, ಗೃಹರಕ್ಷಕರು ಇರುವುದಿಲ್ಲ. ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಇದರಿಂದ ಚೌಕಿಯಲ್ಲಿ ಕಸ-ಕಡ್ಡಿ, ತ್ಯಾಜ್ಯದ ಸ್ಥಾನವಾಗಿದೆ. ಚೌಕಿಗಳ ದಿಂಡುಗಳ ಸಿಮೆಂಟ್ ಪದರಗಳು ಕಿತ್ತುಬಂದಿದೆ’ ಎಂದು ರಾಜೇಶ್‌ ದೂರಿದರು.

ಪೊಲೀಸ್ ಚೌಕಿ ಬಳಿಸಿ: ‘ಪಟ್ಟಣದಲ್ಲಿ ಪೊಲೀಸ್ ಇಲಾಖೆಯವರು ಚೌಕಿಗಳನ್ನು ಮಾಡಿದ್ದಾರೆ. ಆದರೆ ಪೊಲೀಸರು ಬಳಕೆ ಮಾಡದೇ ಇರುವುದರಿಂದ, ಇದೀಗ ಚೌಕಿಗಳು ಉರುಳುವ ಹಂತದಲ್ಲಿ ಇವೆ. ತ್ಯಾಜ್ಯಗಳ ತಾಣವಾಗಿವೆ. ಬೇಕಾಬಿಟ್ಟಿ ವಾಹನಗಳ ನಿಲುಗಡೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT