ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ

‘ಸ್ಮುಲ್‌’ ಆ್ಯಪ್‌ ಸ್ನೇಹಿತನ ಪ್ರೀತಿ ಸಿಗದೇ ಆತ್ಮಹತ್ಯೆ ಎಂದು ವದಂತಿ
Last Updated 28 ಸೆಪ್ಟೆಂಬರ್ 2019, 12:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಗರ್ಲ್ಸ್ ಸ್ಕೂಲ್‌ ರಸ್ತೆಯ ನಿವಾಸಿ ಶಿಲ್ಪಾ (35) ಎಂಬುವರು ಶನಿವಾರ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘‘ಸ್ಮೂಲ್’ ಆ್ಯಪ್‌ ಮೂಲಕ ಪರಿಚಯವಾದ ಹಾಸನ ಮೂಲದ ವ್ಯಕ್ತಿಯೊಬ್ಬನ ಜತೆಗಿನ ಮುನಿಸಿನಿಂದ ಶಿಲ್ಪಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ‘ಸ್ಮೂಲ್’ ಆ್ಯಪ್‌ನಲ್ಲಿ ಶಿಲ್ಪಾ ಅವರು ಮಾಡಿರುವ ಹಾಡಿನ ವಿಡಿಯೊಗಳು ಈಗ ವೈರಲ್ ಆಗುತ್ತಿವೆ.

ಶಿಲ್ಪಾ ಅವರ ಪತಿ ಶಿವಾನಂದ ಬಂಗಾರಪೇಟೆ ಮೂಲದವರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಾನಂದ ಅವರು ನಗರದಲ್ಲಿ ಪ್ಲಬಿಂಗ್ ಕೆಲಸ ಮಾಡುತ್ತಾರೆ. ಮಹಾಲಯ ಅಮವಾಸ್ಯೆ ಪ್ರಯುಕ್ತ ಪತಿ ಮಕ್ಕಳೊಂದಿಗೆ ಬಂಗಾರುಪೇಟೆಗೆ ಹೋಗಿದ್ದ ವೇಳೆ ಮನೆಯಲ್ಲಿ ಒಬ್ಬರೇ ಇದ್ದ ಶಿಲ್ಪಾ ಅವರು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಶಿವಾನಂದ ಅವರು ಬೆಳಿಗ್ಗೆ ಪತ್ನಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡ ಅವರು ಮನೆಯ ಮಾಲೀಕರಿಗೆ ಈ ಬಗ್ಗೆ ತಿಳಿಸಿದ್ದಾರೆ. ಬಾಗಿಲು ಒಡೆದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಅದರಲ್ಲಿ ಶಿಲ್ಪಾ ಅವರು ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ ಎಂದು ಪೊಲೀಸರು ಹೇಳಿದರು.

ಈ ಮಾಧ್ಯಮಗಳ ವರದಿ ಕುರಿತು ಎಸ್‌ಪಿ ಕೆ.ಸಂತೋಷ್ ಬಾಬು ಅವರನ್ನು ವಿಚಾರಿಸಿದಾಗ, ‘ಶಿಲ್ಪಾ ಅವರ ಕುಟುಂಬದವರು ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ದೂರಿನಡಿ ಪ್ರಕರಣ ದಾಖಲಾಗಿದೆ. ವದಂತಿಯ ಆಯಾಮದಿಂದ ಕೂಡ ತನಿಖೆ ನಡೆಸುತ್ತೇವೆ. ಬಳಿಕವಷ್ಟೇ ಆತ್ಮಹತ್ಯೆಯ ನಿಖರ ಕಾರಣ ಹೇಳಲು ಸಾಧ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT