ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಪರಿಣತಿ ಇದ್ದರೆ ಉದ್ಯೋಗಾವಕಾಶ ಹೆಚ್ಚು

ರೂಸಾ ಯೋಜನೆಯ ಅನುದಾನದಲ್ಲಿ ವರ್ಡ್ಸ್ ವರ್ತ್ ಆಂಗ್ಲಭಾಷೆಯ ಪ್ರಯೋಗಾಲಯಕ್ಕೆ ಚಾಲನೆ
Last Updated 12 ಸೆಪ್ಟೆಂಬರ್ 2020, 1:37 IST
ಅಕ್ಷರ ಗಾತ್ರ

ಚಿಂತಾಮಣಿ: ಆಧುನಿಕ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲಭಾಷೆಯ ಜ್ಞಾನ ಅತ್ಯಂತ ಮುಖ್ಯವಾಗಿದೆ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ರೂಸಾ ಯೋಜನೆಯ ಅನುದಾನದಲ್ಲಿ ಸ್ಥಾಪಿಸಿರುವ ಗಣಿತಶಾಸ್ತ್ರ ಮತ್ತು ವರ್ಡ್ಸ್ ವರ್ತ್ ಆಂಗ್ಲಭಾಷೆಯ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಆಂಗ್ಲಭಾಷೆಯಲ್ಲಿ ಪರಿಣತಿ ಇದ್ದಲ್ಲಿ ಮಾತ್ರ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಕಬ್ಬಿಣದ ಕಡಲೆಯಾಗಿದೆ. ಅವರು ಆಂಗ್ಲಭಾಷೆಯ ಕೌಶಲ ಕಲಿಯುವ ಸಲುವಾಗಿಯೇ ರಾಜ್ಯದಲ್ಲಿ ಅತ್ಯುತ್ತಮ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಬಡ ಕುಟುಂಬಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಪ್ರಯೋಗಾಲಯದ ಸದುಪಯೋಗ ಪಡಿಸಿಳ್ಳಬೇಕು ಎಂದು ಹೇಳಿದರು.

ರೂಸಾ ಯೋಜನೆಯ ಸಂಚಾಲಕ ಎ.ಎನ್.ರಘು ಮಾತನಾಡಿ, ರಾಜ್ಯದ 611 ಕಾಲೇಜುಗಳಲ್ಲಿ 60 ಕಾಲೇಜುಗಳಿಗೆ ಮಾತ್ರ ಆಂಗ್ಲಭಾಷೆಯ ಪ್ರಯೋಗಾಲಯ ಮಂಜೂರಾಗಿದೆ. ಅವಿಭಜಿತ ಕೋಲಾರ ಜಿಲ್ಲೆಯ ಏಕೈಕ ಕಾಲೇಜು ಇದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭಾಷೆ, ಉಚ್ಛಾರಣೆ, ಪದಗಳನ್ನು ಸುಲಭವಾಗಿ ಕಲಿಯಲು ಸಹಕಾರಿಯಾಗುತ್ತದೆ ಎಂದರು.

ಪ್ರಾಂಶುಪಾಲ ಪ್ರೊ.ಕೆ.ಆರ್.ಶಿವಶಂಕರಪ್ರಸಾದ್ ಮಾತನಾಡಿದರು. ನಗರಸಭೆ ಸದಸ್ಯರಾದ ಮಂಜುನಾಥ್, ಅಗ್ರಹಾರ ಮುರಳಿ, ದೇವಳಂ ಶಂಕರ್, ನಟರಾಜ್, ಮುಖಂಡರಾದ ವಿ.ಅಮರ್, ಸಿ.ಕೆ.ಶಬ್ಬೀರ್, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ರಾಜಾರೆಡ್ಡಿ, ಪ್ರಾಧ್ಯಾಪಕ ಎಸ್.ಸಣ್ಣೀರಯ್ಯ, ಕೆ.ಚಂದ್ರಶೇಖರ್, ರವಿಕುಮಾರ್, ಕೆ.ಟಿ.ಕೃಷ್ಣಪ್ಪ, ಕೆಂಪರಾಜು, ಆರ್.ಶ್ರೀದೇವಿ, ಎಸ್.ಪ್ರಮೀಳಾ, ಕೆ.ವಿ.ರತ್ನಮ್ಮ, ಟಿ.ಡಿ ಹನುಮಂತರಾಜು, ವಿ.ಕೆ.ರಾಯಪ್ಪ, ಟಿ.ನವೀನ್ ಕುಮಾರ್, ಮಂಜುಳಾ, ಅಶೋಕ್, ಮುನಿಕೃಷ್ಣಪ್ಪ, ಕೇಶವಮೂರ್ತಿ,
ತರನಂ ನಿಖತ್, ಅಧೀಕ್ಷಕ
ಮುನಿಸ್ವಾಮಿ, ನಂಜುಂಡಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT