ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಅತ್ಯಾಚಾರ ಪ್ರಕರಣ: 20 ವರ್ಷ ಜೈಲು, ದಂಡ

Last Updated 25 ಸೆಪ್ಟೆಂಬರ್ 2022, 5:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: 16 ವರ್ಷದ ಬಾಲಕಿಯನ್ನು ಸತತವಾಗಿ ಅತ್ಯಾಚಾರ ಎಸಗಿದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ದೇವಿಹಳ್ಳಿಯ ಡಿ.ಎಂ.ಮಧು (29) ಎಂಬಾತಗೆ 20 ವರ್ಷ ಜೈಲು ಶಿಕ್ಷೆ , ₹ 56 ಸಾವಿರ ದಂಡವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ (ಎಫ್‌ಟಿಎಸ್‌ಸಿ–1) ವಿಧಿಸಿದೆ.

ನ್ಯಾಯಾಧೀಶರಾದ ಬಿ.ವೆಂಕಟೇಶ ಅವರು ಈ ಆದೇಶ ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ ಪರಿಹಾರ ₹ 4 ಲಕ್ಷ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

2020ನೇ ಇಸವಿಯಲ್ಲಿ ಪ್ರಕರಣ ನಡೆದಿತ್ತು. ಮೂಡಿಗೆರೆ ತಾಲ್ಲೂಕಿನ ಹಳ್ಳಿಯೊಂದರ ಬಾಲಕಿಯನ್ನು ಪುಸಲಾಯಿಸಿ ಮನೆಯಿಂದ ಲಾಡ್ಜ್‌ಗೆ ಕರೆದೊಯ್ದು, ಬಾಲಕಿಯ ಮೇಲೆ ಸತತವಾಗಿ ಅತ್ಯಾಚಾರ ಎಸಗಿರುವುದಾಗಿ ವಿವಾಹಿತ ಮಧು ವಿರುದ್ಧ ದೂರು ದಾಖಲಾಗಿತ್ತು.

ಮೂಡಿಗೆರೆ ಠಾಣೆ ಪೊಲೀಸರು ಐಪಿಸಿ 306 (ಅಪಹರಣ), ಅಕ್ರಮ ಬಂಧನ (342) ಹಾಗೂ 376 – 3 (ಮಹಿಳೆ ಮೇಲೆ ನಿರಂತರ ಅತ್ಯಾಚಾರ) ಪ್ರಕರಣ, ಪೊಕ್ಸೊ ಕಾಯ್ದೆಯಡಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಭರತ್‌ಕುಮಾರ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT