ಶನಿವಾರ, ಸೆಪ್ಟೆಂಬರ್ 25, 2021
22 °C

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 24 ಶಿಕ್ಷಕರು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: 2021–22ನೇ ಸಾಲಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳ ಒಟ್ಟು 24 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಸೆ.5ರಂದು ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ
ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ ತಿಳಿಸಿದ್ದಾರೆ.

ಪುರಸ್ಕಾರಕ್ಕೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿ ಇಂತಿದೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಎಚ್‌.ಗಂಗಾಧರಪ್ಪ (ಬ್ಯಾಲದಾಳು), ದಿವಿನ್‌ (ಸುಗುಡವಾನಿ), ಎ.ಈ.ಮೋಹನ್‌ ಕುಮಾರ್‌(ಮಲ್ಲಪ್ಪನಹಳ್ಳಿ), ಎ.ಭಾರತಿ (ಸಣ್ಣಕೆರೆ), ಆರ್‌.ಪ್ರಕಾಶ್‌ (ಕೊಲ್ಲಿಬೈಲು), ಟಿ.ನೇತ್ರಾವತಿ (ಹೊಡೆಯಾಲ), ಕೆ.ಎಲ್‌.ಸುಂದರೇಶ್‌ (ಅಸನಬಾಳು), ಎ.ಆರ್‌.ಸೋಮಪ್ಪ (ಬಿ.ರಾಮನಹಳ್ಳಿ).

ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಟಿ.ಎಸ್‌.ಕುಬೇರ (ಡಿ.ಕಾರೇಹಳ್ಳಿ), ಕೆ.ಅಣ್ಣನಾಯಕ್‌ (ಹಿರೇಕೊಳಲೆ), ಜಿ.ಎಂ.ಕುಮಾರಸ್ವಾಮಿ (ಗೌಡನಕಟ್ಟೆಹಳ್ಳಿ), ಶೈಲ (ಕೆಳಪೇಟೆ), ಬಿ.ಡಿ.ಲಲಿತಾ (ಕಳಸ), ಡಿ.ಸುರೇಶ್‌ (ಸೀತೂರು), ಎಂ.ಎನ್‌.ರಾಜೇಶ್‌ (ಮಸಿಗೆ), ಬಿ.ಲಲಿತಮ್ಮ (ಕೆಂಚಿಕೊಪ್ಪ).

ಪ್ರೌಢ ಶಾಲೆ ವಿಭಾಗ: ದಯಾನಂದ (ಗುಬ್ಬಿಹಳ್ಳಿ), ಎನ್‌.ಎಂ.ಭಾಗ್ಯಶ್ರೀ (ಮೂಗ್ತಿಹಳ್ಳಿ), ಎಚ್.ಎಂ.ರುದ್ರೇಶ್‌ (ಚೌಳಹಿರಿಯೂರು), ಎಂ.ಎಲ್‌.ಸುಧಾ (ಬೊಮ್ಲಾಪುರ), ವೇಣಿ(ಗೋಣಿಬೀಡು), ಕೆ.ಎಂ. ರಾಘವೇಂದ್ರ (ಮೇಲ್ಪಾಲ್‌), ಎಂ.ಆರ್‌. ಭಾಸ್ಕರ್‌ (ಹೊಳೆಕೊಪ್ಪ), ಟಿ.ವಾಣಿ (ಹಾದಿಕೆರೆ)

ಶಿವಕುಮಾರ್‌ಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

2021–22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯ ಪ್ರೌಢಶಾಲೆ ಶಿಕ್ಷಕರೊಬ್ಬರಿಗೆ ಪುರಸ್ಕಾರ ಸಂದಿದೆ.

ಕಳಸದ ಕರ್ನಾಟಕ ಪಬ್ಲಿಕ್‌ ಶಾಲೆಯ ಶಿಕ್ಷಕ ಎಚ್‌.ಎನ್‌.ಶಿವಕುಮಾರ್‌ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.