ಶೃಂಗೇರಿ : ಪಟ್ಟಣದ ಶಾರದಾ ನಗರದಲ್ಲಿ ನ್ಯಾಯಾಲಯಕ್ಕೆ ಮೀಸಲಾದ ಜಾಗ ಒತ್ತುವರಿ ಮಾಡಿದ ಬಿಜೆಪಿ ಮುಖಂಡ ಶಿವಶಂಕರ್ ಅವರಿಗೆ ₹500 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಶಿವಶಂಕರ್ ವಿರುದ್ಧ 2020–21ರಲ್ಲಿ ಅಂದಿನ ತಹಶೀಲ್ದಾರ್ ಅಂಬುಜಾ ಅವರು ಭೂಕಬಳಿಕೆ ಆರೋಪದಲ್ಲಿ ದೂರು ದಾಖಲಿಸಿದ್ದರು.

ಶೃಂಗೇರಿ ಗ್ರಾಮಾಂತರ ಸರ್ವೆ ನಂಬರ್ 150ರಲ್ಲಿ 4 ಎಕರೆ 21 ಗುಂಟೆ ಹಾಗೂ 215ರಲ್ಲಿ 7 ಎಕರೆ 16 ಗುಂಟೆ ಜಾಗವನ್ನು ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ 1980ರಲ್ಲಿ ಮೀಸಲಿರಿಸಲಾಗಿತ್ತು. ಜಾಗವನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.

ಬಿ.ಶಿವಶಂಕರ್ ಅವರು ಸರ್ವೆ ನಂಬರ್ 234/03ರಲ್ಲಿ 3 ಗುಂಟೆ ಜಾಗವನ್ನು 2018-19ರಲ್ಲಿ ಖರೀದಿ ಮಾಡಿದ್ದರು. ಜಾಗದ ಪಕ್ಕದಲ್ಲಿ ಇರುವ ಸರ್ಕಾರಿ ಸರ್ವೆ ನಂಬರ್ 215ರಲ್ಲಿ ಸುಮಾರು 2 ಗುಂಟೆ ಜಾಗದಲ್ಲಿ ಜೆಸಿಬಿ ಬಳಸಿ ಮಣ್ಣು ತೆಗೆದು ಸಮಗೊಳಿಸಿದ್ದರು.

‘ತಗ್ಗು ಪ್ರದೇಶವಾದ ಕಾರಣ ಪಕ್ಕದಲ್ಲಿ ಇರುವ ಜೆಎಂಎಫ್ಸಿ ನ್ಯಾಯಾ ಲಯದ ನ್ಯಾಯಾಧೀಶರ ವಸತಿ ಗೃಹ, ತಾಲ್ಲೂಕು ಕಚೇರಿ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಭೂ ಕುಸಿತದಿಂದ ಹಾನಿಯಾಗುವ ಸ್ಥಿತಿ ಇದೆ’ ಎಂದು ತಹಶೀಲ್ದಾರ್ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ, ಆರೋಪಿಯು ಸರ್ಕಾರಕ್ಕೆ ₹500 ದಂಡ ಪಾವತಿಸಬೇಕು. ದಂಡ ಪಾವತಿಸದಿದ್ದರೆ ಎರಡು ತಿಂಗಳು ಸಾದಾ ಸಜೆ ಅನುಭವಿಸಬೇಕು ಎಂದು ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-126-2061826367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.