ಭಾನುವಾರ, ಆಗಸ್ಟ್ 1, 2021
27 °C
ಸಾವಿರ ಗಡಿ ದಾಟಿದ ಒಟ್ಟು ಪ್ರಕರಣ ಸಂಖ್ಯೆ

ಚಿಕ್ಕಮಗಳೂರು: 56 ಮಂದಿಗೆ ಕೋವಿಡ್‌ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶನಿವಾರ 56 ಮಂದಿಗೆ ಸೋಂಕು ದೃಢಪಟ್ಟಿದೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1046ಕ್ಕೆ ತಲುಪಿದೆ.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 30, ಕಡೂರು– 9, ತರೀಕೆರೆ–8, ಅಜ್ಜಂಪುರ– 5, ಎನ್‌.ಆರ್‌.ಪುರ– 3 ಹಾಗೂ ಮೂಡಿಗೆರೆ– ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 585 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 440 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ವಿವಿಧೆಡೆ 404 ನಿಯಂತ್ರಿತ ವಲಯಗಳು (ಕಂಟೈನ್ಮೆಂಟ್‌ ಜೋನ್‌) ಇವೆ. 

303 ಮಂದಿ ಮಾದರಿ ಸಂಗ್ರಹ
ಚಿಕ್ಕಮಗಳೂರು:
ಕೊರೊನಾ ವೈರಾಣು ಸೋಂಕು ಪರೀಕ್ಷೆ ನಿಟ್ಟಿನಲ್ಲಿ ಶನಿವಾರ 303 ಮಂದಿಯ ಗಂಟಲು, ಮೂಗಿನ ದ್ರವ ಮಾದರಿ ಸಂಗ್ರಹಿಸಲಾಗಿದೆ.

419ಮಂದಿಯ ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ಪತ್ತೆಯಾಗಿಲ್ಲ. 1,332 ಮಂದಿಯ ಮಾದರಿ ಪರೀಕ್ಷೆ ವರದಿ ಬರಬೇಕಿದೆ. 290 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು