ಬುಧವಾರ, ನವೆಂಬರ್ 20, 2019
20 °C

ಆಮೆ ಮಾರಾಟ ಯತ್ನ:ಏಳು ಮಂದಿ ಬಂಧನ

Published:
Updated:
Prajavani

ಚಿಕ್ಕಮಗಳೂರು:ನಗರದಲ್ಲಿ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಏಳು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಸಂಜೆ ಬಂದಿಸಿದ್ದಾರೆ.

ಅಂಕುಶ್, ಸುಖೇಶ್, ಪರಮೇಶ್‌ನಾಯಕ, ಸುಮನ್, ದರ್ಶನ್, ನಾಗರಾಜ್, ಹರ್ಷಗೌಡ ಬಂದಿತ ಆರೋಪಿಗಳು. ಆರೋಪಿಗಳಿಂದ ಒಂದು ಆಮೆ, ಒಂದು ಕಾರು, ಎರಡು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
‘ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಆರೋಪಿಗಳು ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲ್ಲೂಕಿನವರಾಗಿದ್ದಾರೆ. ಬಂದಿತರನ್ನು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ’ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿಲ್ಪಾ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಖೆ ಸಿಬ್ಬಂದಿ ರವಿರಾಜ್, ಗೌತಮ್, ವಸಂತ್, ನಂದೀಶ್, ಆಸೀಫ್, ಪುರುಷೋತ್ತಮ್, ಮಹಮ್ಮದ್ ಇದ್ದರು.

ಪ್ರತಿಕ್ರಿಯಿಸಿ (+)