ಸೋಮವಾರ, ಅಕ್ಟೋಬರ್ 14, 2019
24 °C
ಅತಿವೃಷ್ಟಿ; ಜಿಲ್ಲೆಗೆ ₹ 81.82ಕೋಟಿ ಮಂಜೂರು

1373 ಮನೆ ಹಾನಿ– ಸಂತ್ರಸ್ತರ ಖಾತೆಗೆ ₹ 5.88 ಕೋಟಿ ಜಮೆ

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿ ಮನೆಹಾನಿಯ1,373ಪ್ರಕರಣಗಳಿಗೆ ₹ 5.88 ಕೋಟಿಯನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗಿದೆ. ಅಗತ್ಯ ಸಾಮಗ್ರಿಗಳಿಗಾಗಿ 1,125 ಸಂತ್ರಸ್ತರಿಗೆ ತಲಾ ₹ 10 ಸಾವಿರದಂತೆ ₹ 1.12 ಕೋಟಿ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಶೇ 15ರಿಂದ 35ಹಾನಿಯಾಗಿರುವ 760 ಮನೆಗಳಿಗೆ ಒಟ್ಟಾರೆ ₹ 1.90 ಕೋಟಿ, ಶೇ 25ರಿಂದ 75ಹಾನಿಯಾಗಿರುವ 287 ಮನೆಗಳಿಗೆ ₹ 71.75 ಲಕ್ಷ, ಶೇ 75ಕ್ಕಿಂತ ಹೆಚ್ಚ ಹಾನಿಯಾಗಿರುವ 326 ಮನೆಗಳಿಗೆ ₹ 3.26 ಕೋಟಿ ಪಾವತಿಸಲಾಗಿದೆ. ಜಿಲ್ಲೆಯ ಅತಿವೃಷ್ಟಿ ಹಾನಿ ಪರಿಹಾರಕ್ಕೆ ಸರ್ಕಾರವು ₹ 81.12 ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

ರಸ್ತೆ, ಸೇತುವೆಗಳ ತುರ್ತು ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆಗೆ ₹ 31.12 ಕೋಟಿ ಕೋಟಿ ಅನುದಾನ ನೀಡಲಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿ ಶುರುಮಾಡಲಾಗಿದೆ. ಆಸ್ಪತ್ರೆ, ಶಾಲೆ, ಕಾಲೇಜು, ಅಂಗನವಾಡಿ, ಸಾರ್ವಜನಿಕ ಕಟ್ಟಡ ರಿಪೇರಿಗೆ ₹ 20 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಗಳ ಕ್ರಿಯಾ ಯೋಜನೆಯ ಸಿದ್ಧಪಡಿಸಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಗೆ ತುರ್ತು ಪರಿಹಾರಕ್ಕಾಗಿ ₹ 5 ಕೋಟಿ, ರಸ್ತೆ–ಸೇತುವೆ ತುರ್ತು ದುರಸ್ತಿಗೆ 31.12 ಕೋಟಿ, ಸಾರ್ವಜನಿಕ ಕಟ್ಟಡ ರಿಪೇರಿಗೆ 20 ಕೋಟಿ, ಮನೆ ಹಾನಿ ಪರಿಹಾರಕ್ಕಾಗಿ ₹ 25 ಕೋಟಿ ಒಟ್ಟಾರೆ 81. 12 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ಹಾನಿ ಸಂಭವಿಸಿದೆ. ಸರ್ಕಾರವು ಈ ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)