ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಾತಕ್ಕೆ ಉರುಳಿದ ಕಾರು; ಚಾಲಕ ಸಾವು

Published 26 ಅಕ್ಟೋಬರ್ 2023, 14:01 IST
Last Updated 26 ಅಕ್ಟೋಬರ್ 2023, 14:01 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ತಡರಾತ್ರಿ ಮೂಡಿಗೆರೆಯಿಂದ ಕಳಸಕ್ಕೆ ಹೋಗುತ್ತಿದ್ದ  ಕಾರು ಪ್ರಪಾತಕ್ಕೆ ಉರುಳಿ, ಚಾಲಕ ಮೃತಪಟ್ಟಿರುವ ಘಟನೆ ಬಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಜನ್ನಾಪುರದ ಅಣಜೂರು ಮೂಲದ ಅಂಜನ್ (38)ಮೃತಪಟ್ಟವರು.

ಅಂಜನ್‌ ಜನ್ನಾಪುರದಿಂದ ಕಳಸಕ್ಕೆ ನಡುರಾತ್ರಿ ಎರಡು ಗಂಟೆ ಸಮಯದಲ್ಲಿ ಕಾರಿನಲ್ಲಿ ಹೊರಟಿದ್ದರು. ದಟ್ಟ ಮಂಜು  ಆವರಿಸಿದ್ದರಿಂದ ರಸ್ತೆ ಸರಿಯಾಗಿ ಕಾಣದೆ ಅವಘಡ ಸಂಭವಿಸಿದೆ. ರಸ್ತೆಗೆ ತಡೆಗೋಡೆ ಇಲ್ಲದ ಕಾರಣ ನಿಯಂತ್ರಣ ತಪ್ಪಿದ ಕಾರು 400 ಅಡಿಯಷ್ಟು ಆಳದ ಪ್ರಪಾತಕ್ಕೆ ಉರುಳಿದೆ. ಅಂಜನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಜನ್ನಾಪುರದಲ್ಲಿ ಹೋಟೆಲ್ ನಡೆಸುತ್ತಿದ್ದರು. ಬಾಳೂರು ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಶ್ರೀನಾಥ್ ರೆಡ್ಡಿ ಹಾಗೂ  ಸಿಬ್ಬಂದಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರು ಚಾಲಕ ಅಂಜನ್
ಕಾರು ಚಾಲಕ ಅಂಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT