ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿ ಪರಿವರ್ತನೆ: ಆಹಾರದ ಕೊರತೆ

ಜನತಾ ಪಕ್ಷದ ಕೊಡಗು ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ ಅಭಿಮತ
Last Updated 19 ಆಗಸ್ಟ್ 2022, 5:12 IST
ಅಕ್ಷರ ಗಾತ್ರ

ಶೃಂಗೇರಿ: ‘ಕೃಷಿ ಭೂಮಿ ನಿವೇಶನವಾಗಿ ಪರಿವರ್ತನೆಯಾಗುತ್ತಿದ್ದು, ಭವಿಷ್ಯದಲ್ಲಿ ಆಹಾರ ಕೊರತೆ ಎದುರಿಸುವ ಭಿತಿ ಇದೆ. ಈ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ' ಎಂದು ಜನತಾ ಪಕ್ಷದ ಕೊಡಗು ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ ಹೇಳಿದರು.

ಶೃಂಗೇರಿ ಪಟ್ಟಣದ ಕುರುಬಕೇರಿ ರಸ್ತೆಯಲ್ಲಿರುವ ಅದ್ವೈತಾ ಲ್ಯಾನ್ಸರ್ ಸಭಾಂಗಣದಲ್ಲಿ ಜನತಾ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರ ಜಮೀನು ಬೇರೆ ಉದ್ದೇಶಕ್ಕಾಗಿ ಬಳಸುವುದು ಅಪಾಯಕಾರಿಯಾಗಿದ್ದು, ತಿನ್ನಲು ಆಹಾರವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ರೈತರಿಗೆ ಕೃಷಿಗೆ ಪೂರಕ ವಾತಾವರಣ, ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ, ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ನೀಡಬೇಕು' ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ.ರಾಜೇಂದ್ರ ಮಾತನಾಡಿ, `ಜನತಾ ಪಕ್ಷವು 2023 ರ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 23 ಶಾಸಕರನ್ನು ವಿಧಾನಸಭೆಗೆ ಕಳುಹಿಸುವುದು ಮುಖ್ಯ ಉದ್ದೇಶವಾಗಿದೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್‍ಗೌಡ, ಕ್ಷೇತ್ರಾಧ್ಯಕ್ಷ ಡಾ.ಕೆ.ಎಸ್ ವೆಂಕಪ್ಪಚಾರ್ಯ, ಮೂಡಿಗೆರೆ ಅಧ್ಯಕ್ಷ ಧರ್ಮೇಂದ್ರ ಆಚಾರ್ಯ, ಶೃಂಗೇರಿ ಅಧ್ಯಕ್ಷ ಮಹೇಶ್, ಆಶಾ, ಸಚಿನ್, ಪ್ರವೀಣ್, ನಯನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT