ಗುರುವಾರ , ನವೆಂಬರ್ 21, 2019
27 °C

ವಿವಿಧ ಬೇಡಿಕೆ ಈಡೇರಿಸಲು ಗ್ರಾ.ಪಂ.ನೌಕರರ ಒತ್ತಾಯ

Published:
Updated:
Prajavani

ಚಿಕ್ಕಮಗಳೂರು: ಗ್ರಾಮಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ಜಾರಿಗೊಳಿಸುವುದು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಗ್ರಾಮಪಂಚಾಯಿತಿ ನೌಕರರ ಫೆಡರೇಶನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರ ಹೊರವಲಯದ ಜಿಲ್ಲಾಪಂಚಾಯಿತಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ಜಿಲ್ಲಾಪಂಚಾಯಿತಿಯಿಂದ ಅನುಮೋದನೆಗೊಂಡ ಮತ್ತು ಅನುಮೋದನೆ ಆಗದಿರುವ ಗ್ರಾಮಪಂಚಾಯಿತಿಯ ಎಲ್ಲನೌಕರರಿಗೂ ಕನಿಷ್ಠ ವೇತನ ನೀಡಬೇಕು. ಬಾಕಿ ಇರುವ ವೇತನ ಪಾವತಿಸಬೇಕು. ಕರ ವಸೂಲಿಗಾರ ಮತ್ತು ಗುಮಾಸ್ತರ ಜೇಷ್ಠತಾ ಪಟ್ಟಿ ತಯಾರಿಸಿ, ಮುಂಬಡ್ತಿ ನೀಡಬೇಕು. ಅನುಮೋದನೆಗೆ ತಾಲ್ಲೂಕಿಗೆ ಒಬ್ಬರಂತೆ ಅಧಿಕಾರಿ ನಿಯೋಜಿಸಬೇಕು. ನೌಕರರಿಗೆ ಕೆಲಸದ ಸಮಯದಲ್ಲಿ ಅನಾಹುತ, ಅಪಘಾತ, ಅನಾರೋಗ್ಯ ಸಂಭವಿಸಿದರೆ ಮಾನಿವೀಯ ದೃಷ್ಠಿಯಲ್ಲಿ ಸರ್ಕಾರ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಎಸ್.ವಿಜಯಕುಮಾರ್ ಮಾತನಾಡಿ, ಗ್ರಾಮಪಂಚಾಯಿತಿಗಳ ಸ್ವಚ್ಛತೆ, ಸೇವೆ ಗುರುತಿಸಿ ಸರ್ಕಾರ ವಿವಿಧ ಪ್ರಶಸ್ತಿ ನೀಡುತ್ತಿದೆ. ಆದರೆ ಅದಕ್ಕೆ ಶ್ರಮಿಸಿದ ನೀರುಗಂಟಿ, ಜವಾನ, ಜಾಡಮಾಲಿ, ಬಿಲ್‌ ಕಲೆಕ್ಟರ್, ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ದೂರಿದರು.

ಸಂಘದ ರಾಜೇಗೌಡ, ಮೋಹನರಾಜ್, ಮಲ್ಲೇಶಪ್ಪ, ರಾಜು, ಉಮೇಶ್, ಮಂಜುಳಾ, ಉಮೆಶ್ ಇದ್ದರು.

ಪ್ರತಿಕ್ರಿಯಿಸಿ (+)