ಅಜ್ಜಂಪುರ: ‘ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರ ₹4 ಸಾವಿರ ಕೋಟಿ ಅನುದಾನ ಬಿಡುಗಡೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ’ ಎಂದು ಸಿರಿಗೆರೆ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಜಲಧಿಹಳ್ಳಿ ಗ್ರಾಮದಲ್ಲಿ ಶಂಕರಲಿಂಗೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ, ನಂದಿ ಪ್ರತಿಷ್ಠಾಪನೆ, ಶಿಖರ ಕಳಶಾರೋಹಣ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ. ಮಹಿಳೆಯರು ಸ್ವಯಂ ಸ್ಫೂರ್ತಿಯಿಂದ ಗ್ಯಾರಂಟಿ ಯೋಜನೆ ತ್ಯಜಿಸಬೇಕು. ಆಗ ಸರ್ಕಾರ, ಅಭಿವೃದ್ಧಿ ಯೋಜನೆಗೆ ಹಣ ಬಿಡುಗಡೆಗೊಳಿಸಲು ಅನುಕೂಲ ಆಗುತ್ತದೆ ಎಂದರು.

ಮುಖಂಡ ಡಿ.ಎಸ್. ಸುರೇಶ್ ಮಾತನಾಡಿ, ಜಲಧಿಹಳ್ಳಿಯಲ್ಲಿ ಭಕ್ತರ ಸಹಕಾರದಿಂದ ₹2 ಕೋಟಿ ವೆಚ್ಚದಲ್ಲಿ ಶಂಕರಲಿಂಗೇಶ್ವರ ದೇವಾಲಯ ನಿರ್ಮಾಣಗೊಂಡು, ಲೋಕಾರ್ಪಣೆಗೊಂಡಿರುವುದು ಹರ್ಷ ತಂದಿದೆ ಎಂದರು.

ಬಿಜೆಪಿ ಮುಖಂಡ ಸಿ.ಎಂ. ರಾಜಪ್ಪ, ‘ಅಜ್ಜಂಪುರ ಮತ್ತು ತರೀಕೆರೆ ರೈಲು ನಿಲ್ದಾಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಮಾಡಿರುವ ಮನವಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಮುಖಂಡರಾದ ಕೆ.ಆರ್. ಆನಂದಪ್ಪ, ಶಂಕರಲಿಂಗಪ್ಪ, ಶಿವಮೂರ್ತಿ, ರಚನಾ ಶ್ರೀನಿವಾಸ್, ದೋರನಾಳು ಪರಮೇಶ್, ನಾಗೇಂದ್ರಪ್ಪ, ಮಂಜುನಾಥ್ ಮಾತನಾ ಡಿದರು. ಉಪನ್ಯಾಸಕ ಹೊನ್ನೇಬಾಗಿ ಬಸವರಾಜ್ ಉಪನ್ಯಾಸ ನೀಡಿದರು.

ಇದೇ ಪ್ರಯುಕ್ತ ಗುರುವಾರ ಧ್ವಜಾರೋಹಣ, ಕಳಶೋತ್ಸವ ನಡೆಯಿತು. ಉಮಾಮಹೇಶ್ವರ ಸ್ವಾಮಿ ದೇವಾಲಯದಿಂದ ಶಂಕರಲಿಂಗೇಶ್ವರ ಸ್ವಾಮಿ ದೇವಾಲಯದವರೆಗೆ ಮೆರವಣಿಗೆ, ದೇವಾಲಯ ಪ್ರವೇಶ, ಗಂಗಾ, ದೀಪ, ಮಹಾಗಣಪತಿ, ನಾಂದಿ, ನವಗ್ರಹ ಪೂಜೆ, ಪಂಚಕಳಸ, ಅಷ್ಟ ದಿಕ್ಪಾಲಕರ ಪೂಜೆ, ಅಷ್ಟಲಕ್ಷ್ಮಿ, ನವದುರ್ಗ ಪೂಜೆ ಜರುಗಿತು.

ಶುಕ್ರವಾರ ವಿವಿಧ ಧಾರ್ಮಿಕ ವಿಧಿಗಳ ಜೊತೆ ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶಿಖರ ಕಳಶಾರೋಹಣ ನಡೆಯಿತು. ಉಮಾಮಹೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಸಮುದಾಯ ಭವನ ಸಂಘ, ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮದ ಭಕ್ತರು ಕಾರ್ಯಕ್ರಮ ಆಯೋಜಿಸಿದ್ದರು.

ಏ. 26ರಂದು ಉಮಾಮಹೇಶ್ವರ ಸ್ವಾಮಿ ಕೆಂಡದಾರ್ಚನೆ ಮತ್ತು ರಥೋತ್ಸವ ಆರಂಭಗೊಳ್ಳಲಿದ್ದು, ಕಂಕಣ ಪೂಜೆ, ಧ್ವಜಾರೋಹಣ ನಡೆಯಲಿದೆ. 27ರಂದು ರಥೋತ್ಸವ, ಜಂಪೋತ್ಸವ. 28ರಂದು ಕೆಂಡೋತ್ಸವ, ದಾಸೋಹ. 29ರಂದು ಅವಭೃತ ಸ್ನಾನ ಜರುಗಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-126-1401834369

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.