ಅಜ್ಜಂಪುರ: ಮೇ 9 ಮತ್ತು 10ರಂದು ನಡೆಯುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಿಲ್ಲಾಮಟ್ಟದ ಜಯಂತ್ಯುತ್ಸವಕ್ಕೆ ಗೊಂಡೇದಹಳ್ಳಿ ಗ್ರಾಮ ಸಜ್ಜುಗೊಂಡಿದೆ.

ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳನ್ನು ಬಡಗನಾಡು ಹೇಮರೆಡ್ಡಿ ವೀರಶೈವ ಜನಾಂಗ ಗಿರಿಯಾಪುರ ಕೇಂದ್ರ ಸಂಘ ಹಾಗೂ ಗೊಂಡೇದಹಳ್ಳಿ ಘಟಕ ಪೂರ್ಣಗೊಳಿಸಿದೆ.

ಇಡೀ ಗ್ರಾಮ ಸ್ವಚ್ಛಗೊಂಡಿದ್ದು, ಅಲ್ಲಲ್ಲಿ ಕಟ್ಟಿರುವ ತಳಿರು–ತೋರಣ ಊರ ಹಬ್ಬಕ್ಕೆ ಕಳೆ ತಂದಿವೆ. ಗ್ರಾಮದ ಮುಖ್ಯ ರಸ್ತೆ, ದೇವಾಲಯಗಳಲ್ಲಿ ವಿದ್ಯುತ್ ದೀಪ ಬೆಳಗುತ್ತಿವೆ. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಬರುವವರಿಗೆ ಕುಡಿಯುವ ನೀರು, ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ.

ಮೇ 9ರಂದು ಮಧ್ಯಾಹ್ನ 3ಕ್ಕೆ ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಉತ್ಸವ ಮೂರ್ತಿ ಹಾಗೂ ಬಸವೇಶ್ವರ, ರುದ್ರದೇವರ ಉತ್ಸವಮೂರ್ತಿ ಮೆರವಣಿಗೆ ಜಾನಪದ ಕಲಾತಂಡ ಹಾಗೂ ಕೊಂಬು-ಕಹಳೆ, ಮಂಗಳವಾದ್ಯದೊಂದಿಗೆ ನಡೆಯಲಿದೆ.

ಸಂಜೆ 5.30ಕ್ಕೆ ಯಡಿಯೂರು ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಬಡಗನಾಡು ಹೇಮರೆಡ್ಡಿ ವೀರಶೈವ ಜನಾಂಗ ಕೇಂದ್ರ ಸಂಘ ಅಧ್ಯಕ್ಷ ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಶಾಸಕ ಜಿ.ಎಚ್. ಶ್ರೀನಿವಾಸ್ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ, ನಾಡೋಜ ಗೊ.ರು. ಚನ್ನಬಸಪ್ಪ ಎಸ್ಎಸ್ಎಲ್ಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಮುಖಂಡ ಡಿ.ಎಸ್. ಸುರೇಶ್, ಎಸ್.ಎಂ. ನಾಗರಾಜ್, ಬೆಳ್ಳಿಪ್ರಕಾಶ್ ಅವರು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.

ಮುಖಂಡ ವೈ.ಎಸ್.ವಿ. ದತ್ತ ನೀಟ್, ಸಿಇಟಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್. ಆನಂದಪ್ಪ ಅವರು, ಗ್ರಾಮದ ಹಿರಿಯ ನಾಗರಿಕರಿಗೆ ಗೌರವ ಸಮರ್ಪಿಸಲಿದ್ದಾರೆ.

ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್, ಹೇಮರೆಡ್ಡಿ ವೀರಶೈವ ಜನಾಂಗ ಸಂಘ ಗಿರಿಯಾಪುರ ಅಧ್ಯಕ್ಷಮುರುಗೇಶ್, ಬಗ್ಗವಳ್ಳಿ ಅಧ್ಯಕ್ಷ ಹೇಮಂತ್ ಕುಮಾರ್, ಗ್ರಾಮ ಅಧ್ಯಕ್ಷಗಿರೀಶ್, ನೀಲಕಂಠಪ್ಪ ಪಾಲ್ಗೊಳ್ಳಲಿ ದ್ದಾರೆ. ರಾತ್ರಿ 9ಕ್ಕೆ ಗದಗದ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ’ ನಾಟಕ ಪ್ರದರ್ಶಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-126-1987012332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.