ಅಜ್ಜಂಪುರ: ಹೆಚ್ಚುವರಿ ಭೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಹೆಬ್ಬೂರು ಗ್ರಾಮದ ಭದ್ರಾ ಮೇಲ್ದಂಡೆ ಯೋಜನೆ ಸಂತ್ರಸ್ತ ರೈತರು ಗ್ರಾಮದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಳಿ ಶನಿವಾರ ಪ್ರತಿಭಟಿಸಿದರು.

2016-17ರಲ್ಲಿ ಅತಿ ಕಡಿಮೆ ಮೊತ್ತದ ಭೂ ಪರಿಹಾರ ವಿತರಿಸಲಾಗಿದೆ. ಇದನ್ನು ವಿರೋಧಿಸಿ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಅದು ಇತ್ಯರ್ಥವಾಗಿಲ್ಲ. ಕೋರ್ಟ್ ತೀರ್ಪಿನ ಬಳಿಕ ಕಾಮಗಾರಿ ಕೈಗೊಳ್ಳಿ ಅಥವಾ ಅಬ್ಬಿನಹೊಳಲು, ಕಾಟಿಗನರೆ, ಸೊಲ್ಲಾಪುರ, ಚಿಣ್ಣಾಪುರ ಗ್ರಾಮದ ಸಂತ್ರಸ್ತ ರೈತರಿಗೆ ನೀಡಿದಂತೆ ಹೆಚ್ಚುವರಿ ಭೂ ಪರಿಹಾರ ನೀಡಿದ ಬಳಿಕ, ಕಾಮಗಾರಿ ನಡೆಸಿ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.

ಪ್ರತಿಭಟನೆ ಭಾಗವಾಗಿ ಸಂತ್ರಸ್ತರು ಗ್ರಾಮದ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ವೈ-ಜಂಕ್ಷನ್ ಗೇಟ್ ಕಾಮಗಾರಿ ಮತ್ತು ವೈ -ಜಂಕ್ಷನ್ನಿಂದ 0.6ರಿಂದ 0.9 ಕಿ.ಮೀ ವರೆಗಿನ ಕಾಮಗಾರಿಗೆ ಅಡ್ಡಿಪಡಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ವಿಶ್ವೇಶ್ವರಯ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಕವಿತಾ, ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ನ್ಯಾಯಾಲಯ ಅಥವಾ ಲೋಕ ಅದಾಲತ್ನಲ್ಲಿ ಅಬ್ಬಿನಹೊಳಲು ಸೇರಿದಂತೆ ಇತರ ಗ್ರಾಮಗಳ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ ರೀತಿಯಲ್ಲಿ ಪೂರ್ಣಗೊಳಿಸುವಂತೆ, ನಿಗಮ ಮಂಡಳಿ ಅಥವಾ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ಪ್ರಸ್ತುತ ಪ್ರತಿಭಟನೆ ಕೈ ಬಿಟ್ಟು, ಕಾಮಗಾರಿಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.

ಬಳಿಕ ಪ್ರತಿಭಟನೆ ಕೈಬಿಟ್ಟ ಸಂತ್ರಸ್ತ ರೈತರು, ‘ವೈ-ಜಂಕ್ಷನ್ ಕಾಮಗಾರಿಗೆ ಅಡ್ಡಿಪಡಿಸುವುದಿಲ್ಲ. ಆದರೆ, ಪ್ರಕರಣ ಇತ್ಯರ್ಥ ಆಗುವವರೆಗೂ ಗ್ರಾಮದ ಸರಹದ್ದಿನಲ್ಲಿನ ತುಮಕೂರು ಶಾಖಾ ಕಾಲುವೆ ಕಾಮಗಾರಿ ಕೈಗೊಳ್ಳಬಾರದು’ ಎಂದು ಪಟ್ಟು ಹಿಡಿದರು.

ರೈತರು, ಶಾಂತಿಯುತವಾಗಿರಬೇಕು. ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕು ಎಂದು ತರೀಕೆರೆ ಡಿವೈಎಸ್ಪಿ ಪರಶುರಾಮಪ್ಪ ಮನವಿ ಮಾಡಿದರು.

ಸಂತ್ರಸ್ತ ರೈತರಾದ ವಸಂತ್ ಕುಮಾರ್, ಬಸವರಾಜಪ್ಪ, ಈಶ್ವರಪ್ಪ, ಭೋಗರಾಜ್ ಭಾಗವಹಿಸಿದ್ದರು.

ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಶ್, ಸಹಾಯಕ ಎಂಜಿನಿಯರ್ ಹರ್ಷಿತ್, ಸದ್ಭವ್, ರಾಕೇಶ್ ಬಂಬೂರೆ ಇದ್ದರು.

ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್, ಹಾಲಪ್ಪ, ಗಿರೀಶ್ ಸೇರಿದಂತೆ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-126-2107925853

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.