ಆಲ್ದೂರು: ಪೊಲೀಸರಿಗೆ ಜನರ ಸಹಕಾರ ಅಗತ್ಯ:ಎಸ್ಪಿ

ಆಲ್ದೂರು: ಆಲ್ದೂರು ಸರ್ಕಲ್ ವ್ಯಾಪ್ತಿಯ ಮಲ್ಲಂದೂರು ಪೊಲೀಸ್ ಠಾಣೆಯ ನವೀಕೃತ ಕಟ್ಟಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉದ್ಘಾಟಿಸಿದರು.
ಪೊಲೀಸ್ ಠಾಣೆ ಎಂದರೆ ಜನರಲ್ಲಿ ಸಮಸ್ಯೆ ಆದಾಗ ಮತ್ತು ಅಪರಾಧಿಗಳು ಹೆಚ್ಚಾಗಿ ಭೇಟಿ ಕೊಡುವ ಸ್ಥಳವೆನ್ನುವ ಮನೋಭಾವ ಇದೆ. ಸಾರ್ವಜನಿಕರು ನಿರ್ಭೀತಿಯಿಂದ ಠಾಣೆಗೆ ಭೇಟಿ ಕೊಡುತ್ತೇವೆ ಎಂದು ತಿಳಿಸಿದ್ದು, ಹೊಸತನಕ್ಕೆ ಮುನ್ನುಡಿ ಬರೆದಂತಾಗಿದೆ. ಪೊಲೀಸ್ ಠಾಣೆಗಳು ಮಾದರಿಯಾಗಲು ನೆರೆಹೊರೆಯವರ ಸಹಕಾರ ಅಗತ್ಯ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಜತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಒಕ್ಕಲಿಗ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಡ್ಲಾ ಪ್ರಕಾಶ್ ಮಾತನಾಡಿ, ಠಾಣೆಯಲ್ಲಿ ಭಾರ
ತೀಯ ದಂಡ ಸಂಹಿತೆ ಪುಸ್ತಕ, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಪುಸ್ತಕಗಳು, ಕಾನೂನು ಅರಿವು ಸಂಬಂಧ ಪುಸ್ತಕಗಳನ್ನು ಇಡುವ ನೂತನ ಗ್ರಂಥಾಲಯ ಯೋಜನೆ ರೂಪಿಸಿರುವುದನ್ನು ಶ್ಲಾಘಿಸಿದರು.
ಗ್ರಾಮದ ಮುಖಂಡ ಪುಟ್ಟೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಚಿಕ್ಕಮಗಳೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಪುರುಷೋತ್ತಮ್, ಆಲ್ದೂರು ವೃತ್ತ ನಿರೀಕ್ಷಕ ಸತ್ಯನಾರಾಯಣ, ಉಪನಿರೀಕ್ಷಕ ಸಜಿತ್ ಕುಮಾರ್ ಜಿ.ಆರ್, ಠಾಣೆಯ ಉಪನಿರೀಕ್ಷಕ ರವೀಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.