ಆಲ್ದೂರು: ಸಮೀಪದ ತುಡುಕೂರು ಗ್ರಾಮದಲ್ಲಿರುವ ಆಲ್ದೂರು ಪ್ಲಾಂಟರ್ಸ್ ಕ್ಲಬ್ನಲ್ಲಿ ನೂತನ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಆಲ್ದೂರು ಕಾಫಿ ಘಟಕವನ್ನು ಶನಿವಾರ ಉದ್ಘಾಟಿಸಲಾಯಿತು.

ಸೀನಿಯರ್ ಪಿಪಿಎಫ್ನ ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಜಯೇಶ್ ಮಾತನಾಡಿ, ಉತ್ತಮ ನಾಗರಿಕತ್ವ ಮತ್ತು ಬೆಳವಣಿಗೆ, ವ್ಯಕ್ತಿತ್ವ ವಿಕಸನಕ್ಕೆ ಎಸ್ಸಿಐ ಘಟಕ ಮುನ್ನುಡಿಯಾಗಿದ್ದು, ಪ್ರಪಂಚದ ಇತರ ದೇಶಗಳು ಭಾರತವನ್ನು ತಿರುಗಿ ನೋಡುವಂತೆ ಮಾಡಿದೆ. ಎಸ್ಸಿಐ ಘಟಕವು ಅದೇ ರೀತಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆಯಾಗಿ ನೀಡಲು ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾವಯವ ಕೃಷಿ ಸಾಧಕ, ಕಾಫಿ ಬೆಳೆಗಾರ ತೌಸಿಫ್ ಅಲಿ ಮಾತನಾಡಿ, ‘ಸಮಾಜಮುಖಿ ಚಿಂತನೆಗಳೊಂದಿಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಬೇಕು’ ಎಂದರು.

ಡಾ.ರಾಮಚರಣ್ ಅಡ್ಯಂತಾಯ ಪ್ರತಿಜ್ಞಾವಿಧಿ ಬೋಧಿಸಿದರು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕಾಫಿ ಆಲ್ದೂರು ಲೀಜನ್ ಘಟಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ದಿನೇಶ್ ಗುಡ್ಡದೂರು, ಹಿಂದೆ ಜೆಸಿಐನಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಮೆಲುಕು ಹಾಕಿ ಸದಸ್ಯರೆಲ್ಲರ ಮಾರ್ಗದರ್ಶನ, ಸಲಹೆಗಳು ಘಟಕ ಯಶಸ್ವಿಯಾಗಿ ಮುನ್ನಡೆಯಲು ಅಗತ್ಯ ಎಂದರು.

ಮ್ಯಾನೇಜ್ಮೆಂಟ್ ಮುಖ್ಯಸ್ಥ ಸಿದ್ದಗಂಗಯ್ಯ ಅವರು ಎಸ್ಸಿಐ ಘಟಕದ ಸಮಾಜಮುಖಿ ಕೆಲಸಗಳು ಸರ್ವರನ್ನೂ ಆಕರ್ಷಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ಕುರಿತು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಚಿಂತಿಸಲಾಗಿದೆ ಎಂದರು.

ಪರಿಸರ ಸಂರಕ್ಷಣೆ ಪ್ರಶಸ್ತಿ ಪಡೆದ ತೌಸಿಫ್ ಅಲಿ ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಕಾರ್ಯದರ್ಶಿ ಎಚ್.ಎಲ್.ರವಿಕುಮಾರ್, ಖಜಾಂಚಿ ಬಾಲಕೃಷ್ಣ, ನಿರ್ದೇಶಕರಾದ ಸಿ.ಸಿ.ಈರೇಗೌಡ, ಮೂಡಿಗೆರೆ ಘಟಕದ ಅಧ್ಯಕ್ಷ ಅಮೀನ್ ಅಹಮದ್, ಮನಮೋಹನ್, ವಿನೋದ್ ಆಳ್ವ, ಎಚ್.ಎಲ್.ಕೃಷ್ಣ, ವಿನೋದ್, ಪ್ರವೀಣ್ ವೈ.ಜಿ., ಶಾಕಿರ್ ಅಹಮದ್, ಡಿ.ಸಿ.ಗಿರೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-126-1376640611

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.