ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಶುಕ್ರವಾರ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಆಲ್ದೂರು ಸುತ್ತಮುತ್ತ ಭಾರಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.

ಬಿರುಗಾಳಿ ಸಹಿತ ಅಬ್ಬರಿಸಿದ ಆಲಿಕಲ್ಲು ಮಳೆಗೆ ಚಿಕ್ಕಮಗಳೂರು–ಆಲ್ದೂರು–ಬಾಳೆಹೊನ್ನೂರು ರಸ್ತೆಯಲ್ಲಿ ವಿದ್ಯುತ್ ಕಂಬಗಳು, ಮರಗಳು ಉರುಳಿದವು. ಸೇತುವೆ ಮೇಲೆಯೇ ವಿದ್ಯುತ್ ಕಂಬ ಸಹಿತ ಮರ ಉರುಳಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜನ ಹಳ್ಳದ ಕಾಲು ದಾರಿಯಲ್ಲಿ ಇಳಿದು ಮನೆ ಸೇರಿದರು.

ಇನ್ನು ಹಲವು ಮನೆಗಳು ಮತ್ತು ವರ್ಕ್ಶಾಪ್ಗಳ ಮೇಲ್ಚಾವಣಿ ಹಾರಿ ಹೋಗಿದೆ. ಹೈಟೆಕ್ ವ್ಹೀಲ್ ಜೋನ್ ಎಂಬ ವ್ಹೀಲ್ ಅಲೈನ್ಮೆಂಟ್ ಶಾಪ್ ಒಂದರ ಮೇಲ್ಚಾವಣಿ ಶೀಟ್ಗಳು ಅರ್ಧ ಕಿಲೋ ಮೀಟರ್ಗೆ ಹೆಚ್ಚು ದೂರು ಹಾರಿ ಬಿದ್ದಿವೆ.

12 ವಿದ್ಯುತ್ ಕಂಬಗಳು ಉರುಳಿವೆ. ಆಲ್ದೂರು ಪಟ್ಟಣದ ರೈಸ್ ಮಿಲ್ ರಸ್ತೆ ಮತ್ತು ಮೇದರ ಬೀದಿಯಲ್ಲಿ ಹಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.