ಆಲ್ದೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ಬಾಳೆಹೊನ್ನೂರಿನ ಸುಭದ್ರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಘದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸಂಘದ ನಿಕಟಪೂರ್ವ ಅಧ್ಯಕ್ಷ ದೇವಯ್ಯ ಬಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ‘ಬೆರಳೆಣಿಕೆಯಷ್ಟು ಸದಸ್ಯರು ಹಾಗೂ ನಿರ್ದೇಶಕರೊಂದಿಗೆ ಆರಂಭವಾದ ಸಹಕಾರಿ ಸಂಘ ಇಂದು ಉತ್ತಮ ನೆಲೆಯಲ್ಲಿ ಸಾಗುತ್ತಿದೆ. 9 ವರ್ಷಗಳಿಂದ ಗ್ರಾಹಕರ ವಿಶ್ವಾಸ, ಉತ್ತಮ ಸೇವೆ, ಸದೃಢ ಆರ್ಥಿಕ ಸ್ಥಿತಿ ಹಾಗೂ ಆಕರ್ಷಕ ಠೇವಣಿ ಯೋಜನೆಗಳ ಮೂಲಕ ಸಂಘ ಬೆಳವಣಿಗೆ ಕಂಡಿದೆ. ಉತ್ತಮ ಠೇವಣಿದಾರರು ಹಾಗೂ ಉತ್ತಮ ಗ್ರಾಹಕರಿಗೆ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಫಿ ಬೆಳೆಗಾರ ಸಿ. ಸುರೇಶ್, ‘ಸಂಘದ ವತಿಯಿಂದ ಸಾಧ್ಯವಾದಷ್ಟು ಸಣ್ಣ ಉದ್ಯಮಿಗಳು ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಇಂಥವರಿಗೆ ನೆರವು ನೀಡಿದರೆ ಮರುಪಾವತಿಯೊಂದಿಗೆ ಸಂಘವೂ ಉತ್ತಮ ಬೆಳವಣಿಗೆ ಕಾಣಲಿದೆ’ ಎಂದರು.

ಸೌಹಾರ್ದ ಅಭಿವೃದ್ಧಿ ಅಧಿಕಾರಿ ಅಶೋಕ್ ಜಿ. ಮಾತನಾಡಿ, ಸಹಕಾರ ಸಂಘಗಳ ಕಾಯ್ದೆಗಳು, ಕಾನೂನುಗಳು, ಸಂಘದ ವಿವಿಧ ವಿಭಾಗಗಳು, ಶಾಖೆಗಳ ಕಾರ್ಯವೈಖರಿ ಹಾಗೂ ಲಾಭದೊಂದಿಗೆ ಅಭಿವೃದ್ಧಿಯ ಮಾಹಿತಿ ಹಂಚಿಕೊಂಡರು.

ವೃತ್ತ ನಿರೀಕ್ಷಕ ಪಿ.ಪಿ. ಸೋಮೇಗೌಡ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಅಧ್ಯಕ್ಷ ಮೋಹನದಾಸ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಎಚ್.ಸಿ., ಬಿಜೆಪಿ ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-126-1772767306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.