ಆಲ್ದೂರು: ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಪ್ಲಾಸ್ಟಿಕ್ ಕಸ ಎಸೆಯಲಾಗುತ್ತಿದ್ದು, ಸ್ವಚ್ಛತೆಗೆ ಕಂಟಕವಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಆಲ್ದೂರು ಪಂಚಾಯಿತಿ ವಾರ್ಳ್ ಸಂತೆ ಮೈದಾನ, ವಗರ್ ರಸ್ತೆ, ಬಿರಂಜಿ ಹೊಳೆ ರಸ್ತೆ ಬದಿ, ಬಿಕೆರೆ ಪಕ್ಕದ ಖಾಲಿ ಸ್ಥಳ ಮತ್ತು ಸ್ಮಶಾನ ಭೂಮಿಯ ಬಳಿಯ ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕಸ, ಕೊಳೆತ ಹಣ್ಣು, ತರಕಾರಿ ಮತ್ತು ಮೃತಪಟ್ಟ ಜಾನುವಾರುಗಳ ಕಳೇಬರವನ್ನೂ ಎಸೆಯಲಾಗುತ್ತಿದೆ. ಇದರಿಂದ ದುರ್ವಾಸನೆ ಈ ಪ್ರದೇಶ ವ್ಯಾಪಿಸಿ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಂತೆ ಮೈದಾನ ಹಂದಿ ಮಳಿಗೆ ಬಳಿ ಹಾಕಿರುವ ಕಸದ ರಾಶಿ ಮತ್ತು ಸಂತೆಕಟ್ಟೆಯ ಬಳಿ ಹಾಕುತ್ತಿರುವ ಕಸ ತೆರವುಗೊಳಿಸಿಲ್ಲ. ಕಸದ ರಾಶಿಯ ಹಣ್ಣು, ತರಕಾರಿ ಸೇವಿಸುವಾಗ ಜಾನುವಾರುಗಳು ಸೇರದಿಂತೆ ಇತರ ಪ್ರಾಣಿಗಳು ಪ್ಲಾಸ್ಟಿಕ್ ಮತ್ತು ಗಾಜಿನ ಚೂರುಗಳನ್ನು ಸೇವಿಸಿ ಅಸುನೀಗುವ ಸಾಧ್ಯತೆ ಇದೆ. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರಿಗೆ ದಂಡ ವಿಧಿಸಿ ಕಸವನ್ನು ಅವದಿಂದಲೇ ತೆಗೆಸಬೇಕು ಎಂದು ಸ್ಥಳೀಯರದಾ ಕೃಪಾಕ್ಷ ಕೋಟ್ಯಾನ್, ಅರವಿಂದ್ ಬಿ.ಪಿ. ಆಗ್ರಹಿಸಿದರು.

ಪರಿಸರದ ಸ್ವಚ್ಛತೆಗೆ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ಮನಃಸ್ಥಿತಿಯನ್ನು ಬದಲಿಸಲು ಅರಿವು ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ಸಲಹೆ ನೀಡಿದರು.

‘ನಾಗರಿಕರು ಎಚ್ಚೆತ್ತುಕೊಳ್ಳದಿದ್ದರೆ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಅಲ್ಲದೆ ಪರಿಸರ ಮಾಲಿನ್ಯ ಪ್ರಮಾಣ ದ್ವಿಗುಣಗೊಳ್ಳಲಿದೆ’ ಎಂದು ಕಾಫಿ ಬೆಳೆಗಾರ ತೌಸಿಫ್ ಅಲಿ ಆತಂಕ ವ್ಯಕ್ತಪಡಿಸಿದರು.

ಕಸದ ರಾಶಿಯನ್ನು ಪಂಚಾಯಿತಿಯಿಂದ ಸ್ವಚ್ಛಗೊಳಿಸಲಾಗುವುದು. ನಾಗರಿಕರು ಕಸದ ಗಾಡಿಗೇ ಕಸವನ್ನು ನೀಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್ ಮನವಿ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-126-2068030860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.