ಆಲ್ದೂರು: ಪಟ್ಟಣದ ಸಮೀಪದ ಗಾಳಿಗಂಡಿ ವಾರ್ಡ್ನ ರಾಜ್ಯ ಹೆದ್ದಾರಿ 27ರ ರಸ್ತೆ ಬದಿಯಲ್ಲಿ ಕಸದ ರಾಶಿಯಿಂದ ತುಂಬಿದ್ದ ಖಾಲಿ ಜಾಗವನ್ನು ಮೂವರು ಯುವಕರ ತಂಡವು ಪುಟ್ಟ ಉದ್ಯಾನವಾಗಿ ಮಾರ್ಪಡು ಮಾಡಿದ್ದು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸ್ಥಳದಲ್ಲಿ ಜನರು ಪ್ಲಾಸ್ಟಿಕ್ ಕಸ, ಇತರ ಕೊಳೆತ ಪದಾರ್ಥಗಳನ್ನು ತಂದು ಹಾಕುವುದು, ಗುಟ್ಕಾ, ಪಾನ್ ಮಸಾಲ ಉಗುಳುವುದು ಮಾಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮದ ನಟರಾಜ್, ಗಣೇಶ್ ಮತ್ತು ಸತೀಶ್ ಕೂಡಿಕೊಂಡು ಕಸದ ರಾಶಿಯನ್ನು ಸ್ವಚ್ಛಗೊಳಿಸಿ, ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಗಿಡಗಳು ಈಗ ಹೂವು ಬಿಟ್ಟಿದ್ದು, ಕಣ್ಮನ ಸೆಳೆಯುತ್ತಿವೆ.

‘ಈ ಜಾಗವನ್ನು ಉದ್ಯಾನವಾಗಿ ಮಾರ್ಪಡು ಮಾಡಿದ ಪರಿಣಾಮ ಜನರು ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಇದು ಸಂತಸ ತಂದಿದೆ’ ಎಂದು ನಟರಾಜ್ ಹೇಳಿದರು.‘ಉದ್ಯಾನವನ್ನು ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-126-591128152

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.