ಆಲ್ದೂರು: ಪಟ್ಟಣದ ಮೆಸ್ಕಾಂ ಉಪ ವಿಭಾಗ ಕಚೇರಿ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಜನಸಂಪರ್ಕ ಸಭೆ ನಡೆಯಿತು.

ಮುಖ್ಯ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಮಾತನಾಡಿ, ಮೆಸ್ಕಾಂ ವ್ಯಾಪ್ತಿಯಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿಗಳನ್ನು ಅತಿ ಎತ್ತರದ ಕಂಬಗಳನ್ನು ಅಳವಡಿಸಿ ಸರಿಪಡಿಸಲಾಗಿದೆ. ಗ್ರಾಹಕರಿಗೆ ತೊಂದರೆಯಾಗದಂತೆ ವಿದ್ಯುತ್ ಕಾಮಗಾರಿಗಳ ದುರಸ್ತಿ ಮಾಡುವ ಮುನ್ನ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡಿ ಬಳಿಕ ಸಮರ್ಪಕವಾಗಿ ನಿರ್ವಹಿಸಿದ್ದೇವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಶಾಲಾ ಪರಿಸರ, ಸಾರ್ವಜನಿಕ ವಲಯಗಳಲ್ಲಿ ವಿದ್ಯುಚ್ಛಕ್ತಿ ಜಾಗೃತಿ ಮಾಹಿತಿ ಇಲ್ಲದೆ ಬಹಳಷ್ಟು ಅವಘಡ ಸಂಭವಿಸುತ್ತಿದ್ದು, ಜೀವ ಹಾನಿ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ಜಾಗೃತಿ ಮೂಡಿಸಿ ನಿಭಾಯಿಸಲು ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತಾ ಜಾಗೃತಿ ಅರಿವು ಕಾರ್ಯಕ್ರಮವನ್ನು ಇಲಾಖೆ ಕಡೆಯಿಂದ ನಡೆಸಲಾಗುವುದು ಎಂದರು.

ವಿದ್ಯುತ್ ಬಳಕೆಯನ್ನು ಸುರಕ್ಷಿತವಾಗಿ ನಿಭಾಯಿಸುವ ಬಗ್ಗೆ, ತುರ್ತು ಸಂದರ್ಭಗಳಲ್ಲಿ ವಿದ್ಯುತ್ ತಂತಿಗಳನ್ನು, ಕೆಲಸಗಳನ್ನು ತರಬೇತಿ ಇಲ್ಲದವರು ನಿರ್ವಹಿಸುತ್ತಿದ್ದಾರೆ. ಕೆಲ ಪರವಾನಗಿ ಪಡೆಯದೆ ಇರುವ ಗುತ್ತಿಗೆದಾರರು ವೃತ್ತಿ ನೈಪುಣ್ಯತೆ ಇಲ್ಲದ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಮಾಹಿತಿಗಳು ಬರುತ್ತಿದ್ದು, ಇಲಾಖೆ ಗಮನಕ್ಕೆ ಬಂದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಂತೆ ಮೈದಾನ ವಾರ್ಡ್ ಗ್ರಾಹಕ ಕೃಪಾಕ್ಷ ಕೋಟ್ಯಾನ್, ಖಾಸಗಿ ಕೆಲಸಗಳಿಗೆ ಬಳಸುವ ಕಮರ್ಷಿಯಲ್ ಮೀಟರ್ ಅಳವಡಿಕೆಗೆ ಇರುವ ನಿಯಮಗಳನ್ನು ತಿಳಿಸುವಂತೆ ಹೇಳಿದರು. ಗ್ರಾಹಕ ಶರತ್ ಮನೆಯ ವಿದ್ಯುತ್ ಸಂಪರ್ಕಕ್ಕೆ ಒದಗಿಸಬೇಕಾಗಿರುವ ದಾಖಲಾತಿ ಮಾಹಿತಿಗಳನ್ನು ಪಡೆದುಕೊಂಡರು.

ಕಾರ್ಯನಿರ್ವಾಹಕ ಎಂಜಿನಿಯರ್ ಮಾರುತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ಸತೀಶ್, ಕಿರಿಯ ಸಹಾಯಕ ಎಂಜಿನಿಯರ್ಗಳಾದ ಕೃಷ್ಣಮೂರ್ತಿ, ಗಿರೀಶ್, ಕಚೇರಿ ಲೆಕ್ಕಿಗರಾದ ಸೋನಾಲಿ, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.